ಗೌರಿ ಹತ್ಯೆ ಪ್ರಕರಣ: ಇನ್ನೊಬ್ಬ ಆರೋಪಿಯ ಬಂಧಿಸಿದ ಎಸ್ ಐಟಿ
ಬೆಳಗಾವಿಯ ಡಾಬಾ ಮಾಲಿಕನೊಬ್ಬನನ್ನು ಎಸ್ ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಬೆಳಗಾವಿಯ ಸಂಭಾಜಿ ಗಲ್ಲಿಯ ಡಾಬಾ ಮಾಲಿಕ ಭರತ್ ಎಂಬಾತ ಬಂಧನಕ್ಕೊಳಗಾದ ವ್ಯಕ್ತಿ.
ಗೌರಿ ಹತ್ಯೆ ಪ್ರಕರಣದ ಆರೋಪಿಗಳಾದ ಪರಶುರಾಮ್ ವಾಗ್ಮೋaರೆ ಮತ್ತು ಅಮೋಲ್ ಕಾಳೆ ಈತನ ಡಾಬಾಕ್ಕೆ ಬರುತ್ತಿದ್ದರು ಎನ್ನಲಾಗಿದ್ದು ಧರ್ಮ ಪ್ರಚಾರಕರು ಎಂಬ ಕಾರಣಕ್ಕೆ ಇವರಿಗೆ ಡಾಬಾ ಮಾಲಿಕ ಆಶ್ರಯ ನೀಡಿದ್ದನಂತೆ. ಇದೇ ಕಾರಣಕ್ಕೆ ಈಗ ಈತನನ್ನು ವಿಚಾರಣೆ ನಡೆಸಲಾಗುತ್ತಿದೆ.