ಪುರುಷರನ್ನು ದೋಚುತ್ತಿದ್ದ ಖತರ್ನಾಕ್ ಮಹಿಳೆಯರು!
ದೆಹಲಿಯ ಮೆಟ್ರೋ ಸ್ಟೇಷನ್ ನಲ್ಲಿ ಸಹಾಯ ಮಾಡಿ ಎಂದು ಕಿರುಚಾಡಿ ಅಪಾಯದಲ್ಲಿದ್ದವರಂತೆ ಸೋಗು ಹಾಕುತ್ತಿದ್ದ ಸ್ವೀಟಿ(24), ಮುಸ್ಕಾನ್ (25) ಎಂಬ ಮಹಿಳೆಯರಿಬ್ಬರು ತಮ್ಮ ಬಳಿ ಬರುತ್ತಿದ್ದ ಪುರುಷರನ್ನು ದೋಚಿ ಟೋಪಿ ಹಾಕುತ್ತಿದ್ದರು.
ಇವರನ್ನೀಗ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 4 ರಂದು ಇದೇ ಕೆಲಸ ಮಾಡಿದಾಗ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ತಾವು ದೋಚಿದ ವ್ಯಕ್ತಿ ತಮ್ಮನ್ನು ಅಟ್ಟಾಡಿಸಿಕೊಂಡು ಬರುವಾಗ ಇಬ್ಬರೂ ಖತರ್ನಾಕ್ ಮಹಿಳೆಯರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.