ನವದೆಹಲಿ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮೋದಿ ಸಂಪುಟದಲ್ಲಿ ಈಗಲೇ ಬೇಡಿಕೆಯಿಟ್ಟಿದ್ದಾರೆಂಬ ಸುದ್ದಿಯಿದೆ.
ಎನ್‍ಡಿಎ ಸಭೆ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿ, ಕೃಷಿ ಕ್ಷೇತ್ರದಲ್ಲಿ ನನಗೆ ಆಸಕ್ತಿ ಇದೆ. ಪ್ರಧಾನಿ ಮೋದಿ ಜೊತೆಗೆ ಮೀಟಿಂಗ್ ಆದ ಬಳಿಕ ಎಲ್ಲವೂ ನಿರ್ಧಾರ ಆಗಲಿದೆ. ಈ ಮೂಲಕ ಮೋದಿ ಸಚಿವ ಸಂಪುಟದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನದ ನಿರೀಕ್ಷೆಯಿರುವುದು ತಿಳಿದುಬಂದಿದೆ.
ನಮ್ಮ ಬೇಡಿಕೆಯೇನಿಲ್ಲ, ಆದರೆ ನಮ್ಮ ಪಕ್ಷದ ಪ್ರಮುಖ ಆಸಕ್ತಿಯಿರುವುದು ರೈತರಿಗೆ ಸಹಾಯ ಮಾಡುವ ಗುರಿ. ಸದ್ಯ ನಮ್ಮ ಮೊದಲ ಆದ್ಯತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಬೇಕು ಎಂದರು.
ರಾಜ್ಯದ ಹಿತದೃಷ್ಟಿಯಿಂದ ಏನು ಮಾಡಬೇಕೆಂದು ಬಿಜೆಪಿ ನಾಯಕರಿಗೆ ಗೊತ್ತಿದೆ. ಅದರ ಪ್ರಕಾರ ಸಚಿವ ಸ್ಥಾನ ನೀಡುವ ನಿರ್ಧಾರ ಆಗಲಿದೆ. ಇಂಡಿಯಾ ಮೈತ್ರಿಕೂಟ ದೇಶಕ್ಕೆ ಒಳ್ಳೆಯದಲ್ಲ. ದೇಶದ ಅಭಿವೃದ್ಧಿಗೆ ಇಂಡಿಯಾ ಮೈತ್ರಿಕೂಟದಿಂದ ಅನುಕೂಲ ಇಲ್ಲ ಎಂದು ಹೇಳಿದರು.