ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋದರೆ ಈ ವಸ್ತುಗಳನ್ನು ತಪ್ಪದೇ ಮನೆಗೆ ತನ್ನಿ. ಅವುಗಳು ಯಾವುವು ನೋಡಿ.
ಮಹಾ ಕುಂಭಮೇಳ ಎನ್ನುವುದು ಹಿಂದೂಗಳ ಪವಿತ್ರ ಧಾರ್ಮಿಕ ಸಮಾವೇಶವಾಗಿದೆ. ತ್ರಿವೇಣಿ ಸಂಗಮದಲ್ಲಿ ಮಿಂದು ಜನ್ಮ ಜನ್ಮಾಂತರದ ಪಾಪ ಕಳೆಯುವುದರ ಜೊತೆಗೆ ಮೋಕ್ಷ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಸಾಕಷ್ಟು ಜನ ಕರ್ನಾಟಕದಲ್ಲೂ ಪ್ರಯಾಗ್ ರಾಜ್ ಗೆ ತೆರಳಿ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ.
ಕುಂಭಮೇಳಕ್ಕೆ ಹೋದವರು ತರಬೇಕಾದ ವಸ್ತುಗಳು
ಮಹಾಕುಂಭ ನಡೆಯುವುದು ಗಂಗಾ ನದಿಯ ತಟದಲ್ಲಿ. ಗಂಗಾ ನದಿಯ ನೀರು, ಮಣ್ಣು ಹಿಂದೂಗಳ ಪಾಲಿಗೆ ಅತ್ಯಂತ ಪೂಜನೀಯ ವಸ್ತುವಾಗಿದೆ. ಹೀಗಾಗಿ ತಪ್ಪದೇ ಇಲ್ಲಿಂದ ಬರುವಾಗ ಗಂಗಾ ನದಿಯ ನೀರು ಮತ್ತು ಮಣ್ಣು ತನ್ನಿ. ಈ ಮಣ್ಣನ್ನು ನಿಮ್ಮ ತುಳಸಿ ಕಟ್ಟೆಯಲ್ಲಿ ಹಾಕಿಡಿ.
ಮಹಾಕುಂಭಮೇಳದಲ್ಲಿ ಪವಿತ್ರ ರುದ್ರಾಕ್ಷಿ ಕಾಯಿಗಳನ್ನು ಮಾರುವವರು ಸಾಕಷ್ಟು ಜನ ಸಿಗುತ್ತಾರೆ. ಇಲ್ಲಿ ಸಿಗುವ ರುದ್ರಾಕ್ಷಿ ಅತ್ಯಂತ ಪವಿತ್ರದ್ದಾಗಿದ್ದು ಮನೆಗೆ ತಂದರೆ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಹೀಗಾಗಿ ರುದ್ರಾಕ್ಷಿ ತಂದು ದೇವರ ಮನೆಯಲ್ಲಿಡಿ.
ಮಹಾಕುಂಭಮೇಳದಿಂದ ಹಿಂದೂಗಳು ಪೂಜನೀಯವಾಗಿ ಪರಿಗಣಿಸುವ ಶಂಖ, ಗಂಟೆ ಇತ್ಯಾದಿ ಯಾವುದೇ ವಸ್ತುಗಳನ್ನು ತಂದು ದೇವರ ಮನೆಯಲ್ಲಿಡಿ. ಎಲ್ಲಕ್ಕಿಂತ ವಿಶೇಷವಾಗಿ ತ್ರಿವೇಣಿ ಸಂಗಮದ ನೀರು ತಂದು ನಿಮ್ಮ ಮನೆಯಲ್ಲಿ ಪ್ರೋಕ್ಷಣೆ ಮಾಡಿ. ಇದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ.