ಸೊಳ್ಳೆ ಕಡಿತ, ನಾಯಿ ಬೊಗಳುವಿಕೆ ತಾಳಲಾರೆ, ಬೇರೆ ಕಡೆ ಶಿಫ್ಟ್ ಮಾಡಿ! ಲಾಲೂ ಪ್ರಸಾದ್ ಯಾದವ್ ಮೊರೆ!
ಆದರೆ ಇದೀಗ ಲಾಲೂ ಯಾದವ್ ತಮ್ಮನ್ನು ಬೇರೆ ವಾರ್ಡ್ ಗೆ ಶಿಫ್ಟ್ ಮಾಡುವಂತೆ ಕೋರಿದ್ದಾರಂತೆ. ಅದಕ್ಕೆ ಕಾರಣ ಸೊಳ್ಳೆ ಕಡಿತ, ಕೆಟ್ಟ ವಾಸನೆ ಮತ್ತು ನಾಯಿಗಳ ಬೊಗಳುವಿಕೆ. ಇದರಿಂದಾಗಿ ನನಗೆ ವಿಶ್ರಾಂತಿ ಇಲ್ಲದಾಗಿದೆ ಎಂದು ಲಾಲೂ ಯಾದವ್ ಬೇರೆ ವಾರ್ಡ್ ಗೆ ಶಿಫ್ಟ್ ಮಾಡಲು ಕೋರಿದ್ದಾರಂತೆ.
ಲಾಲೂ ಯಾದವ್ ಇರುವ ವಾರ್ಡ್ ನಲ್ಲಿ ಟಾಯ್ಲೆಟ್ ಪೈಪ್ ಬ್ಲಾಕ್ ಆಗಿ ವಿಪರೀತ ಕೆಟ್ಟ ವಾಸನೆ, ಸೊಳ್ಳೆ ಕಡಿತ ಜಾಸ್ತಿಯಾಗಿದೆ. ಇದರಿಂದ ಅವರಿಗೆ ಸೋಂಕು ತಗಲುವ ಸಾಧ್ಯತೆಯಿದೆ. ಅದಕ್ಕೆ ಬೇರೆ ವಾರ್ಡ್ ಕೇಳಿದ್ದಾರೆ ಎಂದು ಆರ್ ಜೆಡಿ ಮೂಲಗಳು ತಿಳಿಸಿವೆ. ಇದೀಗ ಲಾಲೂ ಮನವಿಯನ್ನು ಆಸ್ಪತ್ರೆಯ ನಿರ್ದೇಶಕರು ಪರಿಶೀಲನೆ ನಡೆಸುತ್ತಿದ್ದಾರಂತೆ.