ಜೈಲು ಪಾಲಾಗಿರುವ ಲಾಲೂ ಪ್ರಸಾದ್ ಯಾದವ್ ಗೆ ಇದೆಂಥಾ ಖಾಯಿಲೆ!

ಮಂಗಳವಾರ, 11 ಸೆಪ್ಟಂಬರ್ 2018 (10:25 IST)
ನವದೆಹಲಿ: ಬಹುಕೋಟಿ ಮೇವು ಹಗರಣದ ಆರೋಪದಲ್ಲಿ ಜೈಲು ಪಾಲಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಖಿನ್ನತೆಯಿಂದ ಬಳಲುತ್ತಿದ್ದಾರಂತೆ! ಹಾಗಂತ ಸದ್ಯಕ್ಕೆ ಅವರು ಚಿಕಿತ್ಸೆ ಪಡೆಯುತ್ತಿರುವ ರಾಂಚಿಯ ವೈದ್ಯಕೀಯ ಕಾಲೇಜು ಆಸ್ಪತ್ರೆ (ರಿಮ್ಸ್)ಯ ವೈದ್ಯರು ವರದಿ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಇತ್ತೀಚೆಗಷ್ಟೇ ತಮ್ಮ ಕೊಠಡಿಯಲ್ಲಿ ಶುಚಿತ್ವ ಇಲ್ಲ, ಸೊಳ್ಳೆ ಕಾಟ ವಿಪರೀತ ಎಂದು ಕೊಠಡಿ ಬದಲಾಯಿಸುವಂತೆ ವೈದ್ಯರಿಗೆ ಮನವಿ ಮಾಡಿ ಸುದ್ದಿಯಾಗಿದ್ದರು.

ಇದೀಗ ಲಾಲೂ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಅವರು ಖಿನ್ನತೆಗೊಳಗಾಗಿದ್ದಾರೆ ಎಂದು ರಿಮ್ಸ್ ಆಸ್ಪತ್ರೆ ಮುಖ್ಯಸ್ಥರು ವರದಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ