ಮದುವೆಯಾದ ಆರೇ ತಿಂಗಳಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಲಾಲೂ ಪ್ರಸಾದ್ ಯಾದವ್ ಪುತ್ರ
ಆರು ತಿಂಗಳ ಹಿಂದೆ ತೇಜ್ ಪ್ರತಾಪ್ ಯಾದವ್ ಬಿಹಾರ ಮಾಜಿ ಸಿಎಂ ಚಂದ್ರಿಕಾ ರೈ ಮೊಮ್ಮಗಳು ಐಶ್ವರ್ಯಾ ರೈ ಅವರನ್ನು ಅದ್ಧೂರಿ ಸಮಾರಂಭದಲ್ಲಿ ಮದುವೆಯಾಗಿದ್ದರು.
ಇದೀಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ಆಘಾತ ಮೂಡಿಸಿದೆ. ಆದರೆ ವಿಚ್ಛೇದನಕ್ಕೆ ಕಾರಣ ತಿಳಿದುಬಂದಿಲ್ಲ. ಇದು ಕುಟುಂಬಸ್ಥರಿಗೂ ಅಚ್ಚರಿ ಉಂಟು ಮಾಡಿದೆ ಎನ್ನಲಾಗಿದೆ. ನವಂಬರ್ 29 ರಂದು ಇವರ ವಿಚ್ಛೇದನ ಅರ್ಜಿ ವಿಚಾರಣೆಗೆ ಬರಲಿದೆ.