ಟ್ವಿಟ್ಟರ್ ಖರೀದಿಯಿಂದ ಹಿಂದಕ್ಕೆ ಸರಿಯುವ ತಮ್ಮ ಪ್ರಯತ್ನವನ್ನು ವಿಫಲಗೊಳಿಸಿದ್ದ ವಾಚ್ಟೆಲ್, ಲಿಪ್ಟನ್, ರೋಸೆನ್ ಅಂಡ್ ಕಾಟ್ಜ್ ಎಂಬ ಲಾ ಏಜೆನ್ಸಿ ವಿರುದ್ಧ ಎಲಾನ್ ಮಸ್ಕ್ ಮೊಕದ್ದಮೆ ಹಾಕಿದ್ದಾರೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ಸುಪೀರಿಯರ್ ಕೋರ್ಟ್ನಲ್ಲಿ ಕಳೆದ ವಾರ ಎಕ್ಸ್ ಕಾರ್ಪ್ ಸಂಸ್ಥೆ ದೂರು ದಾಖಲಿಸಿದೆ. ಎಕ್ಸ್ ಕಾರ್ಪ್ ಎಂಬುದು ಎಲಾನ್ ಮಸ್ಕ್ ಮಾಲೀಕತ್ವದ ಕಂಪನಿ.
ಟ್ವಿಟ್ಟರ್ ಖರೀದಿ ಒಪ್ಪಂದ ಪೂರ್ಣಗೊಳ್ಳುವಂತೆ ಮಾಡಲು ವಾಚ್ಟೆಲ್ ಸಂಸ್ಥೆ 90 ಮಿಲಿಯನ್ ಡಾಲರ್ನಷ್ಟು (740 ಕೋಟಿ ರೂ.) ದೊಡ್ಡ ಮೊತ್ತದ ಶುಲ್ಕವನ್ನು ಪಡೆದಿದೆ ಎಂಬುದು ಎಲಾನ್ ಮಸ್ಕ್ ಅವರ ಆರೋಪವಾಗಿದೆ.