ನವದೆಹಲಿ: ಕೇಂದ್ರ ಸರ್ಕಾರದ ಸೂಚನೆಯಂತೆ ಅಟ್ಟಾರಿ-ವಾಘಾ ಗಡಿ ಬಿಂದುವಿನ ಮೂಲಕ ಆರು ದಿನಗಳಲ್ಲಿ 786 ಪಾಕಿಸ್ತಾನಿ ಪ್ರಜೆಗಳು ಭಾರತವನ್ನು ತೊರೆದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಿ ಪ್ರಜೆಗಳ ವಾಸ್ತವ್ಯದ ಮೇಲೆ ನಿರ್ಬಂಧ ಹೇರಲಾಯಿತು.
ಏಪ್ರಿಲ್ 24 ರಿಂದ ಈನತಕ ಒಟ್ಟು 1376 ಮಂದಿ ಪಾಕಿಸ್ತಾನದಿಂದ ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನಿ ಪ್ರಜೆಗಳು ಏಪ್ರಿಲ್ 27 ರೊಳಗೆ ಭಾರತವನ್ನು ತೊರೆಯಬೇಕು ಎಂದು ಏ.24ರಂದು ಕಟ್ಟಾಜ್ಞೆಯನ್ನು ಕೇಂದ್ರ ಸರ್ಕಾರ ಹೊರಿಸಿದರು. ರಾಜತಾಂತ್ರಿಕ, ಅಧಿಕೃತ ಮತ್ತು ದೀರ್ಘಾವಧಿಯ ವೀಸಾಗಳನ್ನು ಹೊಂದಿರುವವರನ್ನು ಭಾರತ ಬಿಟ್ಟು ತೊಲಗಿ ಎಂದು ಸೂಚಿಸಲಾಗಿತ್ತು.
12 ವಿಭಾಗಗಳಲ್ಲಿ ಅಲ್ಪಾವಧಿಯ ವೀಸಾಗಳನ್ನು ಹೊಂದಿರುವ ಪಾಕಿಸ್ತಾನಿಗಳ ಗಡುವು ಭಾನುವಾರ ಕೊನೆಗೊಂಡಿದೆ. ಪಾಕಿಸ್ತಾನಕ್ಕೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಸರ್ಕಾರ ಬಲವಾಗಿ ಸಲಹೆ ನೀಡಿದೆ. ಪ್ರಸ್ತುತ ಪಾಕಿಸ್ತಾನದಲ್ಲಿರುವ ಭಾರತೀಯ ಪ್ರಜೆಗಳಿಗೆ ಆದಷ್ಟು ಬೇಗ ಭಾರತಕ್ಕೆ ಮರಳುವಂತೆ ಸೂಚಿಸಲಾಗಿದೆ.
ಪಾಕಿಸ್ತಾನಕ್ಕೆ ನೇರ ವಿಮಾನವಿಲ್ಲದ ಕಾರಣ ಹಲವರು ದುಬೈ ಅಥವಾ ಇತರ ಮಾರ್ಗಗಳ ಮೂಲಕ ವಿಮಾನದ ಮೂಲಕ ತೆರಳಿದ್ದಾರೆ. ಕೇಂದ್ರ ಗುಪ್ತಚರ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದಲ್ಲಿ ಎಲ್ಲಾ ರಾಜ್ಯಗಳಲ್ಲಿ ದೊಡ್ಡ ಪರಿಶೀಲನೆ ಡ್ರೈವ್ ನಡೆಯುತ್ತಿದೆ.