ರಕ್ತಪಾತದ ನೆಲದ ಯುವಕರ ಸಾಧನೆ ಕೇಳಿದ್ರೆ ಹೌಹಾರುತ್ತಿರಾ

ಸೋಮವಾರ, 14 ನವೆಂಬರ್ 2016 (09:40 IST)
ಪೂಂಚ್: ಬರೀ ಗುಂಡಿನ ಸದ್ದು, ರಕ್ತಪಾತವನ್ನ ಕಂಡ ಇಲ್ಲಿನ ಜನ ಇದೀಗ ಬದಲಾವಣೆಯತ್ತ ದಾಪುಗಾಲಿಟ್ಟಿದ್ದಾರೆ. ಹಾಗಂತ ಭಯೋತ್ಪಾದನೆಗೆ ಇಳಿದ್ರಾ ಅನ್ಕೋಳ್ಳಬೇಡಿ ಬದಲಿಗೆ ಎಜುಕೇಶನ್ ರಂಗದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.


ಹೌದು ಲೈನ್ ಆಫ್ ಕಂಟ್ರೋಲ್ ಕೂಗಳತೆ ದೂರದಲ್ಲಿ ಸಿಂದ್ರಾದ ನಾಲ್ವರು ವಿದ್ಯಾರ್ಥಿಗಳು ಐಐಟಿಗೆ ಸೇರ್ಪಡೆಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.  17ರಿಂದ 19 ವಯಸ್ಸಿನೊಳಗಿನ ನಾಲ್ವರು ವಿದ್ಯಾರ್ಥಿಗಳಾದ ಶಾಹೀದ್ ಅಫ್ರೀದಿ, ಅಖೀಬ್ ಮುಜ್ತಾಬ್, ಉಸ್ಮಾನ್ ಹಫೀಜ್, ಹಿಲಾಲ್ ಅಹ್ಮದ್ ಈ ಸಾಧನೆ ಮಾಡಿದ್ದಾರೆ.
 
ಶಾಹಿದ್ ಕಂಪ್ಯೂಟರ್ ಸೈನ್ಸ್ ಕಾನ್ಪುರ್, ಅಖೀಬ್ ಮೆಕಾನಿಕಲ್ ಎಂಜಿನಿಯರಿಂಗ್ ಭುವನೇಶ್ವರ, ಉಸ್ಮಾನ್ ಇಕ್ಕ್ರ್ಟಿಕಲ್ ಎಂಜಿನಿಯರಿಂಗ್ ದೆಹಲಿ, ಹಿಲಾಲ್ ಕಂಪ್ಯೂಟರ್ ಸೈನ್ಸ್ ಪಾಟ್ನಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ