ಲೋಕಸಭಾ ಚುನಾವಣೆ: ಎರಡು ಗಂಟೆಯಲ್ಲಿ 10 ಪರ್ಸೆಂಟ್ ವೋಟ್

Krishnaveni K

ಸೋಮವಾರ, 20 ಮೇ 2024 (11:21 IST)
ನವದೆಹಲಿ: ಲೋಕಸಭೆ ಚುನಾವಣೆ 2024 ರಲ್ಲಿ ಇಂದು ಐದನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಎರಡು ಗಂಟೆಯಲ್ಲಿ 10 ಶೇಕಡಾ ಮತದಾನ ನಡೆದಿದೆ.

ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ 8 ರಾಜ್ಯಗಳ 49 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. 5 ನೇ ಹಂತದಲ್ಲಿ ಜಾರ್ಖಂಡ್ ನ 3, ಒಡಿಶಾದ 5, ಉತ್ತರಪ್ರದೇಶದ 14, ಬಿಹಾರದ 5, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಲದ 7, ಲಡಾಖ್ ನ 1 ಮತ್ತು ಜಮ್ಮು-ಕಾಶ್ಮೀರದ ತಲಾ 1 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ.

ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ ಪ್ರತಿನಿಧಿಸುತ್ತಿರುವ ರಾಯ್ ಬರೇಲಿಯಲ್ಲಿ ಇಂದು ಮತದಾನ ನಡೆಯುತ್ತಿದೆ. ಅಮೇಠಿಯಲ್ಲಿ ಕಾಂಗ್ರೆಸ್ ನ ಕಿಶೋರಿ ಲಾಲ್ ಶರ್ಮಾ, ಮುಂಬೈ ಉತ್ತರದಲ್ಲಿ ಕೆಂದ್ರ ಸಚಿವ ಪಿಯೂಷ್ ಗೋಯಲ್, ಲಕ್ನೋದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್,  ಹಾಜಿಪುರದಲ್ಲಿ ಚಿರಾಗ್ ಪಾಸ್ವಾನ್ ಮೊದಲಾದ ಘಟಾನುಘಟಿ ನಾಯಕರು ಕಣದಲ್ಲಿದ್ದಾರೆ.

ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಎರಡು ಗಂಟೆಗಳಲ್ಲಿ 10.28 ಶೇಕಡಾ ಮತದಾನ ಪ್ರಕ್ರಿಯೆ ನಡೆದಿದೆ. ಇದುವರೆಗೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ