ಕೆಲವೇ ಕ್ಷಣಗಳಲ್ಲಿ ಎಕ್ಸಿಟ್‌ ಪೋಟ್‌ ರಿಸಲ್ಟ್‌ ಪ್ರಕಟ, ಯಾರಿಗಿದೆ ಮತದಾರರ ಒಲವು

sampriya

ಶನಿವಾರ, 1 ಜೂನ್ 2024 (18:27 IST)
Photo By X
ಬೆಂಗಳೂರು: ಲೋಕಸಭೆ ಚುನಾವಣೆಯ ಏಳನೇ ಹಂತದ ಚುನಾವಣೆ ಇದೀಗ ಮುಗಿದಿದ್ದು,  ಇದೀಗ ಎಕ್ಸಿಟ್ ಪೋಲ್ 2024 ರ ಫಲಿತಾಂಶಗಳು ಕೆಲವೇ ಕ್ಷಣಗಳಲ್ಲಿ ಬಿಡುಗಡೆಯಾಗಲಿವೆ.

ಕೇಂದ್ರ ಚುನಾವಣಾ ಆಯೋಗದ ಸೂಚನೆಯ ಪ್ರಕಾರ, ಮತದಾನ ಮುಗಿದ 30 ನಿಮಿಷಗಳ ನಂತರ ಮತಗಟ್ಟೆ ಸಮೀಕ್ಷೆ ಹೊರಬೀಳಲಿದ್ದು, ಇದರಲ್ಲಿ ಅಂದಾಜು ಫಲಿತಾಂಶದ ಚಿತ್ರಣವನ್ನು ಕಾಣಬಹುದು. ಆದರೆ ಇದೇ ಫಲಿತಾಂಶ ಬರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಲೋಕಸಭೆ ಚುನಾವಣೆಗೆ ಏಪ್ರಿಲ್‌ 19 ರಂದು ಮೊದಲ ಹಂತದ ಚುನಾವಣೆಯೊಂದಿಗೆ ಆರಂಭವಾಗಿದ್ದು, ಇಂದು ನಡೆದ ಮತದಾನದೊಂದಿಗೆ 2024ರ ಲೋಕಸಮರಕ್ಕೆ ತೆರೆಬಿದ್ದಿದೆ. ಇದೀಗ ಎಲ್ಲರ ಗಮನ  ಜೂನ್‌ 4ರ ಫಲಿತಾಂಶದತ್ತ ನೆಟ್ಟಿದ್ದು, ಅದಕ್ಕೂ ಮುನ್ನಾ ಎಕ್ಸಿಟ್‌ ಫೋಲ್‌ ಫಲಿತಾಂಶದ ಬಗ್ಗೆ ಮತದಾರರು ಕುತೂಹಲದಿಂದ ಇದ್ದಾರೆ.

ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲುತ್ತದೆ,  ಯಾವ ಕ್ಷೇತ್ರದಲ್ಲಿ ಹಿನ್ನಡೆಯಾಗಬಹುದು.  ಒಟ್ಟಾರೆಯಾಗಿ ಪಕ್ಷ ಗೆಲ್ಲುವ ಸ್ಥಾನಗಳೆಷ್ಟು ಎನ್ನುವ ಎಲ್ಲ ಅಂದಾಜುಗಳನ್ನು ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನಾ ಎಕ್ಸಿಟ್‌ ಪೋಲ್‌ ನೀಡುತ್ತದೆ.

ಚುನಾವಣೆಯ ಸಂದರ್ಭದಲ್ಲಿ ಮತದಾರರ ಭಾವನೆಯನ್ನು ಅಳೆಯಲು ಎಕ್ಸಿಟ್ ಪೋಲ್‌ಗಳನ್ನು ನಡೆಸಲಾಗುತ್ತದೆ. ಮತಗಟ್ಟೆಗಳಲ್ಲಿ ಮತ ಚಲಾಯಿಸಿ ಬರುವ ಮತದಾರರಿಂದ ಸಂಗ್ರಹಿಸದ ಅಭಿಪ್ರಾಯಗಳನ್ನು ಆಧರಿಸಿ ಈ ಎಕ್ಸಿಟ್‌ ಪೋಲ್‌ಗಳ ಫಲಿತಾಂಶ ನಿರ್ಧಾರವಾಗುತ್ತದೆ.




ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ