ಲೋಕಸಭೆ ಚುನಾವಣೆ: ರಾಷ್ಟ್ರಪತಿ ದ್ರೌಪದಿ ಮುರ್ಮು, ಸಚಿವ ಜೈಶಂಕರ್ ಮತದಾನ

Krishnaveni K

ಶನಿವಾರ, 25 ಮೇ 2024 (09:20 IST)
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಆರನೇ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದೆ. ಇಂದು ಒಟ್ಟು 8 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ಇಂದು ಬಿಹಾರದ 8 ಸ್ಥಾನಗಳು, ಹರಿಯಾಣದ 10 ಸ್ಥಾನಗಳು, ಜಮ್ಮು ಮತ್ತು ಕಾಶ್ಮೀರದ 1 ಸ್ಥಾನ, ಜಾರ್ಖಂಡ್ 4 ಸ್ಥಾನಗಳು, ದೆಹಲಿಯ ಎಲ್ಲಾ 7 ಸ್ಥಾನಗಳು, ಒಡಿಶಾದ 6 ಸ್ಥಾನಗಳು, ಉತ್ತರ ಪ್ರದೇಶದ 14 ಸ್ಥಾನಗಳು, ಪಶ್ಚಿಮ ಬಂಗಾಲದ 8 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ.

ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ವಿದೇಶಾಂಗ ಸಚಿವ ಎಸ್ ಜೈಶಂಕರ್, ಆಪ್ ನಾಯಕಿ ಅತಿಶಿ ಬೆಳ್ಳಂ ಬೆಳಿಗ್ಗೆಯೇ ಮತ ಚಲಾಯಿಸಿದ ಪ್ರಮುಖರು. ದೆಹಲಿಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಸ್ಥಾನ ಹಂಚಿಕೆ ಮಾಡಿಕೊಂಡು ಇದೇ ಮೊದಲ ಬಾರಿಗೆ ಕಣಕ್ಕಿಳಿದಿದೆ. ನಾಲ್ಕು ಸ್ಥಾನಗಳಲ್ಲಿ ಎಎಪಿ, ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಕಣಕ್ಕಿಳಿದಿದೆ.

ಈಗಾಗಲೇ ಐದು ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13 ಮತ್ತು ಮೇ 20 ರಂದು ಐದು ಹಂತದ ಚುನಾವಣೆ ನಡೆದಿತ್ತು. ಇಂದು ಆರನೇ ಹಂತದ ಚುನಾವಣೆ ನಡೆಯುತ್ತಿದೆ. ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ