ಮದುವೆಯಾಗುವುದಾಗಿ ಆಮಿಷ: ನಂಬಿದ ಅಪ್ರಾಪ್ತೆ ಮೇಲೆ ಅತ್ಯಾಚಾರ

ಶನಿವಾರ, 9 ಡಿಸೆಂಬರ್ 2023 (12:52 IST)
ಫೇಸ್ಬುಕ್ ನಲ್ಲಿ ಒಂದು ವರ್ಷಗಳಿಂದ ಸ್ನೇಹಿತನಾಗಿದ್ದ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ಆಮಿಷ ತೋರಿಸಿದ್ದನಂತೆ. ಆತನ ಮಾತನ್ನು ನಂಬಿದ ಅಪ್ರಾಪ್ತೆ  ಮನೆಯವರಿಗೆ ಟ್ಯೂಷನ್ ಗೆ ಹೋಗುವುದಾಗಿ ಸುಳ್ಳು ಹೇಳಿ ದೆಹಲಿಗೆ ಹೋಗಿದ್ದಾಳೆ.
 
ಅಪ್ರಾಪ್ತೆಯೊಬ್ಬಳು ಫೇಸ್ಬುಕ್ ಸ್ನೇಹಿತನ ಮದುವೆ ಆಮಿಷಕ್ಕೆ ಮರುಳಾಗಿ ಸಾಮೂಹಿಕ  ಅತ್ಯಾಚಾರಕ್ಕೊಳಗಾದ ಘಟನೆ ಮೀರತ್ ನಲ್ಲಿ ನಡೆದಿದೆ.
 
ಆದರೆ ಅಲ್ಲಿ ಸ್ನೇಹಿತ ಆಕೆಯನ್ನು ಬೆದರಿಸಿ ಮೀರತ್ ಹೋಟೆಲ್ ಗೆ ಕರೆದೊಯ್ದು ಕೂಡಿಹಾಕಿ ಆತ ಹಾಗೂ ಆತನ ಸ್ನೇಹಿತರು ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಎರಡು ದಿನಗಳ ನಂತರ ಸಂತ್ರಸ್ತೆ ಹೇಗೋ  ಹೊಟೇಲ್ ನಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ