ಭಾರತದ ಕೊರೋನಾ ಪರಿಸ್ಥಿತಿಗೆ ಮರುಗಿ ಭಾರೀ ದೇಣಿಗೆ ನೀಡಿದ ಕೆಕೆಆರ್ ಆಟಗಾರ ಪ್ಯಾಟ್ ಕ್ಯುಮಿನ್ಸ್

ಮಂಗಳವಾರ, 27 ಏಪ್ರಿಲ್ 2021 (10:07 IST)
ಮುಂಬೈ: ಭಾರತದಲ್ಲಿ ಐಪಿಎಲ್ ಆಡುತ್ತಿರುವ ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗ ಪ್ಯಾಟ್ ಕ್ಯುಮಿನ್ಸ್ ಇಲ್ಲಿನ ಕೊರೋನಾ ಪರಿಸ್ಥಿತಿಗೆ ಮರುಗಿ ಭಾರೀ ಮೊತ್ತದ ದೇಣಿಗೆ ನೀಡಿದ್ದಾರೆ.


ಕೋಲ್ಕೊತ್ತಾ ನೈಟ್ ರೈಡರ್ಸ್ ಪರ ಐಪಿಎಲ್ ಆಡುವ ಕ್ರಿಕೆಟಿಗ ಪ್ಯಾಟ್ ಕ್ಯುಮಿನ್ಸ್ ಪಿಎಂ ಕೇರ್ ಫಂಡ್ ಗೆ 50,000 ಡಾಲರ್ ದೇಣಿಗೆ ನೀಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಸಹ ಕ್ರಿಕೆಟಿಗರಿಗೂ ಸಹಾಯ ಮಾಡಲು ಮನವಿ ಮಾಡಿದ್ದಾರೆ. ಆಕ್ಸಿಜನ್ ಖರೀದಿಗೆ ನೆರವಾಗಲು ಅವರು ದೇಣಿಗೆ ನೀಡಿದ್ದಾರೆ.

ಕೆಕೆಆರ್ ಕಳೆದ ವರ್ಷ ಕ್ಯುಮಿನ್ಸ್ ರನ್ನು 15.5 ಕೋಟಿ ರೂ.ಗೆ ಖರೀದಿ ಮಾಡಿತ್ತು. ಈ ಮೂಲಕ ತಮಗೆ ಜನಪ್ರಿಯತೆ, ಹಣ ತಂದಿತ್ತ ಭಾರತೀಯರಿಗೆ ಸಂಕಷ್ಟದ ಸಮಯದಲ್ಲಿ ನೆರವಾಗಲು ಮುಂದೆ ಬಂದಿದ್ದಾರೆ. ಭಾರತೀಯರೆಂದರೆ ನನಗೆ ತುಂಬಾ ಇಷ್ಟ. ಇಲ್ಲಿನ ಜನರ ಪ್ರೀತಿ ಬೇರೆಲ್ಲೂ ಸಿಕ್ಕಿಲ್ಲ. ಅವರು ಸಂಕಷ್ಟದಲ್ಲಿರುವುದು ನನಗೆ ಬೇಸರ ತಂದಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ