ಯಾರನ್ನಾದ್ರೂ ಮುಟ್ಟಿದ್ರೆ ಹುಷಾರ್! ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಎಚ್ಚರಿಕೆ

ಶುಕ್ರವಾರ, 3 ಆಗಸ್ಟ್ 2018 (10:06 IST)
ಕೋಲ್ಕೊತ್ತಾ: ಅಸ್ಸಾಂನಲ್ಲಿ ಅಕ್ರಮ ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ನಡೆಸುತ್ತಿರುವ ನಾಗರಿಕರ ರಾಷ್ಟ್ರೀಯ ದಾಖಲಾತಿ ಕಾರ್ಯದ ವಿರುದ್ಧ ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಸಿಡಿದೆದ್ದಿದ್ದಾರೆ.

ಅಸ್ಸಾಂನಲ್ಲಿ ಯಾರನ್ನಾದ್ರೂ ಮುಟ್ಟಿದ್ರೆ ಹುಷಾರ್ ಎಂದು ಸಿಎಂ ಮಮತಾ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದೇ ವಿಚಾರವಾಗಿ ಈಗ ಸಂಸತ್ತಿನಲ್ಲಿ ಗದ್ದಲ ಉಂಟಾಗಿದೆ. ಅತ್ತ ಮಮತಾ ಬ್ಯಾನರ್ಜಿ ಕೂಡಾ ಕೇಂದ್ರದ ವಿರುದ್ಧ ಕಿಡಿ ಕಾರುತ್ತಲೇ ಇದ್ದಾರೆ.

ನಾಗರಿಕರ ದಾಖಲಾತಿ ಪ್ರಕ್ರಿಯೆ ಅಸ್ಸಾಂನಲ್ಲಿ ಆಂತರಿಕ ಕಲಹಕ್ಕೆ ಕಾರಣವಾಗಬಹುದು ಎಂದು ನಾವು ಎಚ್ಚರಿಸುತ್ತಲೇ ಇದ್ದೇವೆ. ಇಂತಹ ಕ್ರಮದ ಮೂಲಕ ಬಿಜೆಪಿ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಿಸುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ