ಒಂದೇ ದಿನ, ಒಂದೇ ವಿವಾಹ ಸಮಾರಂಭದಲ್ಲಿ ಇಬ್ಬರು ಯುವತಿಯರನ್ನು ವಿವಾಹವಾಗಲು ಯತ್ನಿಸಿದ ಭೂಪ

ಭಾನುವಾರ, 3 ಸೆಪ್ಟಂಬರ್ 2017 (14:51 IST)
ಮಧುರೈ: ಒಂದೇ ದಿನ, ಒಂದೇ ವಿವಾಹ ಸಮಾರಂಭದಲ್ಲಿ ಇಬ್ಬರು ಯುವತಿಯರನ್ನು ವಿವಾಹವಾಗಲು ಬಯಸಿ ಸಂಬಂಧಿಕರನ್ನು ವಿವಾಹಕ್ಕೆ ಆಹ್ವಾನಿಸಿದ ಭೂಪ. ಆದರೆ, ಆತನ ವಿವಾಹ ಕಾರ್ಯಕ್ರಮದ ವಿಲಕ್ಷಣ ಆಮಂತ್ರಣ ಪತ್ರವು ಸಾಮಾಜಿಕ ಅಂತರ್ಜಾಲ ತಾಣದಲ್ಲಿ ವೈರಲ್ ಆಗಿ ವಿವಾಹ ನಿಲ್ಲು ಕಾರಣವಾಯಿತು ಎನ್ನಲಾಗಿದೆ.
ವಿರಡುನಗರ ಜಿಲ್ಲೆಯ ತಿರುಚುಳಿ ಸಮೀಪದ ಎಂ ವೆಲ್ಲೈಪುರಂನ 31 ರ ಹರೆಯದ ರಾಮಮೂರ್ತಿ, ತನ್ನ ಸಹೋದರಿ ಕಲೈಸೆಲ್ವಿಯೊಂದಿಗೆ ವಾಸವಾಗಿದ್ದ. ತನ್ನ ಸಹೋದರಿಯ ಪುತ್ರಿ 21 ವರ್ಷ ವಯಸ್ಸಿನ ರೇಣುಕಾದೇವಿಯನ್ನು ವಿವಾಹವಾಗಲು ಬಯಸಿದ್ದ. ಆದರೆ, ಒಬ್ಬಳನ್ನೇ ವಿವಾಹವಾಗುವುದು ಆತನ ಉದ್ದೇಶವಾಗಿರಲಿಲ್ಲ. ಇಬ್ಬರನ್ನು ವಿವಾಹವಾಗಲು ಬಯಸಿದ್ದ. ಮತ್ತೊಬ್ಬ ಸಹೋದರಿ ಅಮುದಾವಲ್ಲಿಯ ಪುತ್ರಿ 20 ವರ್ಷ ವಯಸ್ಸಿನ ಗಾಯಿತ್ರಿಯನ್ನು ವಿವಾಹವಾಗಲು ನಿರ್ಧರಿಸಿದ್ದ. ಅದು ಒಂದೇ ದಿನ ಒಂದೇ ವಿವಾಹ ಕಾರ್ಯಕ್ರಮದಲ್ಲಿ. ವಿಚಿತ್ರವೆಂದರೆ ಆತನ ವಿವಾಹಕ್ಕೆ ಕುಟುಂಬದವರು ಸಮ್ಮತಿಸಿದ್ದು.
 
ಸೆಪ್ಟೆಂಬರ್ 4 ರಂದು ರಾಮಮೂರ್ತಿಯವರು ರೇಣುಕಾದೇವಿ ಮತ್ತು ಸಿ ಗಾಯಿತ್ರಿ ಅವರನ್ನು ಮದುವೆಯಾಗುತ್ತಾರೆ ಎಂದು ಕುಟುಂಬದವರು ಶೀಘ್ರದಲ್ಲೇ ಆಮಂತ್ರಣ ಪತ್ರಗಳನ್ನು ಮುದ್ರಿಸಿದರು. ಮದುವೆಯು ವೆಲ್ಲಿಯಾಪು ರಾಮ್‌ನಲ್ಲಿರುವ ವಧುವಿನ ಮನೆಯಲ್ಲಿ ನಡೆಯಬೇಕಿತ್ತು. 
 
ಈ ವಿಲಕ್ಷಣ ಆಹ್ವಾನ ಪತ್ರ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಮತ್ತು ಅನೇಕ ವಾಟ್ಸಪ್‌ ಗುಂಪುಗಳಲ್ಲಿ ಪ್ರಸಾರ ಮಾಡಲಾಯಿತು. ಉತ್ತಮ ಉದ್ಯೋಗ ಹೊಂದಿದವರಿಗೆ ಒಬ್ಬಳನ್ನು ವಿವಾಹವಾಗುವುದು ಕಷ್ಟವಾಗಿರುವಾಗ ಈ ವ್ಯಕ್ತಿ ಇಬ್ಬರನ್ನು ಒಂದೇ ದಿನ, ಒಂದೇ ವೇದಿಕೆಯಲ್ಲಿಯೇ ವಿವಾಹವಾಗುತ್ತಿದ್ದಾನೆ. ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ ಆತ ಇಬ್ಬರು ಯುವತಿಯರೊಂದಿಗೆ ತೆಗೆಸಿಕೊಂಡ ಫೋಟೋಗಳು ವೈರಲ್ ಆಗಿರುವುದು ಕಂಡು ಜನರಿಗೆ ಆಶ್ಚರ್ಯವಾಗಿದೆ.
 
ಸಾಮಾಜಿಕ ಅಂತರ್ಜಾಲ ತಾಣದಲ್ಲಿ ವೈರಲ್ ಆದ ನಂತರ ಎಚ್ಚೆತ್ತುಕೊಂಡ ಸಾಮಾಜಿಕ ಕಲ್ಯಾಣ ಅಧಿಕಾರಿ ಯುವತಿಯರ ಪೋಷಕರಿಗೆ ನೋಟಿಸ್ ಜಾರಿ ಮಾಡಿ ತಮ್ಮ ಮುಂದೆ ಹಾಜರಾಗುವಂತೆ ಕೋರಿದ್ದಾರೆ 
 
ಜ್ಯೋತಿಷಿಯೊಬ್ಬರು ರಾಮಮೂರ್ತಿಗೆ ಇಬ್ಬರು ಪತ್ನಿಯರ ಯೋಗವಿದೆ ಎಂದು ತಿಳಿಸಿದ್ದರಿಂದ ತಮ್ಮ ಪುತ್ರಿಗೆ ವಿವಾಹ ಮಾಡಲು ನಿರ್ಧರಿಸಿದ್ದೇವೆ ಎಂದು ಪೋಷಕರು ಅಧಿಕಾರಿಗೆ ತಿಳಿಸಿದ್ದಾರೆ.
 
ಏತನ್ಮಧ್ಯೆ, ಗಾಯಿತ್ರಿ ವಿವಾಹವಾಗಲು ನಿರಾಕರಿಸಿದ್ದಾರೆ. ಆದರೆ, ದೂರು ಕೊಡುವುದರಿಂದ ರಾಮಮೂರ್ತಿಗೆ ಜೈಲು ಶಿಕ್ಷೆಯಾಗಬಹುದು ಎನ್ನುವ ಆತಂಕದಿಂದ ದೂರು ಕೊಡಲು ನಿರಾಕರಿಸಿದ್ದಾರೆ. ಕೊನೆಗೆ ರೇಣುಕಾದೇವಿಯೊಂದಿಗೆ ಮಾತ್ರ ವಿವಾಹ ಮಾಡಲು ಕುಟುಂಬದ ಸದಸ್ಯರು ನಿರ್ಧರಿಸಿದರು ಎನ್ನಲಾಗಿದೆ. 
 
ಸೋಮುವಾರದಂದು ನಡೆಯಲಿರುವ ವಿವಾಹ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಸಮಾಜ ಕಲ್ಯಾಣ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ