ಬಾಯ್ ಫ್ರೆಂಡ್ಸ್ ಜತೆ ಕದ್ದು ಮುಚ್ಚಿ ಲಲ್ಲೆ ಹೊಡೆಯುತ್ತಿದ್ದವರಿಗೆ ಈ ಕಾಮುಕ ಮಾಡುತ್ತಿದ್ದುದೇನು ಗೊತ್ತಾ?!

ಭಾನುವಾರ, 27 ಸೆಪ್ಟಂಬರ್ 2020 (10:35 IST)
ಲಕ್ನೋ: ಬಾಯ್ ಫ್ರೆಂಡ್ಸ್ ಜತೆ ಅರಣ್ಯ ಪ್ರದೇಶಕ್ಕೆ ಬಂದು ಲವ್ವಿ ಡವ್ವಿ ಮಾಡುತ್ತಿದ್ದ ಮಹಿಳೆಯರ ವಿಡಿಯೋ ತೆಗೆದು ಬಳಿಕ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.


ಅಸಾಲ್ತ್ ಜಂಗ್ ಅರಣ್ಯ ಪ್ರದೇಶದಲ್ಲಿ ಲಲ್ಲೆ ಹೊಡೆಯುತ್ತಿರುವ ಪ್ರೇಮಿಗಳ ವಿಡಿಯೋ ಸೆರೆಹಿಡಿಯುತ್ತಿದ್ದ ಈತ ಬಳಿಕ ಪೊಲೀಸ್ ಅಥವಾ ಮಾಧ್ಯಮದವನೆಂದು ನಂಬಿಸಿ ಅವರಿಗೆ ವಿಡಿಯೋ ತೋರಿಸಿ ಬೆದರಿಕೆ ಹಾಕುತ್ತಿದ್ದ. ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಜತೆಗೆ ಅವರ ಪರ್ಸ್, ಮೊಬೈಲ್ ಕಿತ್ತುಕೊಂಡು ಕಿರುಕುಳ ನೀಡುತ್ತಿದ್ದ. ಈತನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ