5 ರೂ. ಕೇಳಿದ ಪತ್ನಿಯ ಮೇಲಿನ ಸಿಟ್ಟಿಗೆ ಹಸುಗೂಸನ್ನೇ ಕೊಂದ ಪಾಪಿ
ಶುಕ್ರವಾರ, 5 ಫೆಬ್ರವರಿ 2021 (11:17 IST)
ಮುಂಬೈ: ಮಗುವಿಗೆ ಸಿಹಿ ತಿನಿಸು ಕೊಡಿಸಬೇಕು, ಐದು ರೂ. ಕೊಡು ಎಂದು ಪತ್ನಿ ಕೇಳಿದ್ದಕ್ಕೆ ಪಾಪಿ ಪತಿ 20 ತಿಂಗಳ ಹಸುಗೂಸನ್ನೇ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಗು ಅಳುತ್ತಿದೆ, ಸಿಹಿ ಕೊಡಿಸಬೇಕು ಎಂದು ಕೇವಲ 5 ರೂ.ಗೆ ಬೇಡಿಕೆಯಿಟ್ಟಿದ್ದಕ್ಕೆ ಸಿಟ್ಟಿಗೆದ್ದ ಪತಿ ಈ ಕೃತ್ಯವೆಸಗಿದ್ದಾನೆ. ಮಗುವಿನ ತಲೆಯನ್ನು ಬಾಗಿಲಿಗೆ ಚಚ್ಚಿ ಹತ್ಯೆ ಮಾಡಿದ್ದಾನೆ. ತಡೆಯಲು ಬಂದ ಪತ್ನಿಯ ಮೇಲೂ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.