ಅಮ್ಮನ ಅಕ್ರಮ ಸಂಬಂಧದಿಂದ ಬೇಸತ್ತ ಮಗಳು ಮಾಡಿದ್ದೇನು ಗೊತ್ತಾ?
ಬುಧವಾರ, 3 ಫೆಬ್ರವರಿ 2021 (09:59 IST)
ಚೆನ್ನೈ: ಅಮ್ಮನ ಅಕ್ರಮ ಸಂಬಂಧದಿಂದ ಬೇಸತ್ತ ಹದಿಹರೆಯದ ಮಗಳು ಆಕೆಯನ್ನು ಹತ್ಯೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಅಮ್ಮನ ಬೇರೊಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಬೆಳೆಸಿರುವುದು ತಿಳಿದ ಮಗಳು ಆಕೆಗೆ ಎಚ್ಚರಿಕೆ ನೀಡಿದ್ದಳು. ಆದರೆ ಇದಕ್ಕೆ ಆಕೆ ಜಗ್ಗಲಿಲ್ಲ. ಈ ಕುರಿತು ಇಬ್ಬರ ನಡುವೆ ಆಗಾಗ ಕಲಹವಾಗುತ್ತಿತ್ತು. ಆದರೆ ಈ ಬಾರಿ ಇದು ವಿಕೋಪಕ್ಕೆ ತಿರುಗಿದ್ದು, 19 ವರ್ಷದ ಪುತ್ರಿ ಅಮ್ಮನ ತಲೆಗೆ ಕಲ್ಲಿನಿಂದ ಜಜ್ಜಿ ಪ್ರಾಣ ಹರಣ ಮಾಡಿದ್ದಾಳೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.