ತಿರುವನಂತಪುರಂ ಮೃಗಾಲಯದಲ್ಲಿನ ಸಿಂಹದ ಪಂಜರಕ್ಕೆ ಹಾರಿದ ಭೂಪ

ಅತಿಥಾ

ಗುರುವಾರ, 22 ಫೆಬ್ರವರಿ 2018 (16:28 IST)
ತಿರುವನಂತಪುರಂ ಮೃಗಾಲಯದಲ್ಲಿ ಸಂದರ್ಶಕನೊಬ್ಬ 5 ಅಡಿ ಎತ್ತರದ ಗೋಡೆಯನ್ನು ಹತ್ತಿ ಸಿಂಹದ ಪಂಜರಕ್ಕೆ ಹಾರಿದ ಘಟನೆ ನಡೆದಿದೆ. ಈತ ಪ್ರಾಣಿಗಳ ಹತ್ತಿರಕ್ಕೆ ಹೋಗುತ್ತಿದ್ದನ್ನು ಕಂಡು ಗಾಬರಿಗೊಂಡ ಪ್ರವಾಸಿಗರು ಕಾವಲುಗಾರರನ್ನು ತಿಳಿಸಿದರೆ ಮತ್ತು ಕೂಡಲೆ ಸ್ಥಳಕ್ಕೆ ಬಂದ ಮೃಗಾಲಯದ ಸಿಬ್ಬಂದಿಗಳು ಪ್ರಾಣಿಗಳ ಗಮನವನ್ನು ಬೆರೆಡೆಗೆ ಬದಲಾಯಿಸಿ ಅವನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಲಾಯಿತು.
ಈ ವ್ಯಕ್ತಿಯನ್ನು ಪಾಲಕ್ಕಾಡ್ ಜಿಲ್ಲೆಯ ಒಟ್ಟಪ್ಪಲಂ ನಿವಾಸಿ ಮುರುಗನ್ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಈತ ಕಾಣೆಯಾಗಿರುವುದಾಗಿ ವರದಿ ಮಾಡಲಾಗಿದೆ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಲಾಗಿದೆ. ಈತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದಾಗಿಯೂ ಸ್ಪಷ್ಟವಾಗಿಲ್ಲ. ಮೃಗಾಲಯದ ಪ್ರವಾಸಿಗರಲ್ಲಿ ಒಬ್ಬರು ತಮ್ಮ ಸೆಲ್ ಫೋನ್‌ನಲ್ಲಿ ಮುರುಗನ್ ಸಿಂಹದ ಪಂಜರದೆಡೆಗೆ ತೆವಳುತ್ತಾ ಹೋಗುವುದನ್ನು ಚಿತ್ರೀಕರಿಸಿ ಮೃಗಾಲಯದ ಸಿಬ್ಬಂದಿಗಳಿಗೆ ತೋರಿಸಿದ್ದಾರೆ
 
"ಸಿಬ್ಬಂದಿಯೊಬ್ಬ ಬಂದು ನನಗೆ ಈ ವಿಷಯ ತಿಳಿಸಿದಾಗ ಬೆಳೆಗ್ಗಿನ ಸುಮಾರು 11:15 ಗಂಟೆಯಾಗಿತ್ತು. ನಾವು ತಕ್ಷಣ ಪೊಲೀಸ್ ಮತ್ತು ಅಗ್ನಿಶಾಮಕದವರನ್ನು ತಿಳಿಸಿದ್ದೆವು. ಹೊರಬರಲು ನಾವು ಅವನನ್ನು ಕೇಳಿದಾಗ, ಅವನು ನಮ್ಮ ಮಾತನ್ನು ಕೇಳದೇ, ಪ್ರಾಣಿಗಳ ಪಂಜರಕ್ಕೆ ತೆವಳುತ್ತಾ ಹೋಗುವುದನ್ನು ಮುಂದುವರೆಸಿದ. ಅವನು ಸಿಂಹದ ಪಂಜರದ ಸುತ್ತಲರುವ ಕಂದಕಕ್ಕೆ ಹಾರಿದ ಕಾರಣ ಅವನ ಕಾಲಿಗೆ ಗಾಯವಾಗಿರಬಹುದು ಎಂದು ನಾವು ಭಾವಿಸುತ್ತೇವೆ. ನಮ್ಮ ಗಾರ್ಡ್‌ಗಳು ತಕ್ಷಣ ಸಿಂಹವನ್ನು ಪಂಜರದ ಒಳಗೆ ಕೂಡಿ ಹಾಕಿದ ಕಾರಣ ಪ್ರಾಣಿಗಳು ಅವನ ಮೇಲೆ ದಾಳಿ ಮಾಡಲಿಲ್ಲ. ನಂತರ ನಾವು ಈತನನ್ನು ಹೊರಗೆಳೆದೆವು. ಅವನು ಏನನ್ನೂ ಹೇಳುತ್ತಿರಲಿಲ್ಲ, ಆದ್ದರಿಂದ ನಾವು ಆತನನ್ನು ಪೋಲಿಸ್‌ಗೆ ಒಪ್ಪಿಸಿದ್ದೇವೆ." ಎಂದು ಜೈಲ್ ಮೇಲ್ವಿಚಾರಕ ಅನಿಲ್ ಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ