ಸಿಂಹ ಯಾರಾಗಬೇಕು ಎಂಬುದು ಜನ ತೀರ್ಮಾನಿಸುತ್ತಾರೆ– ಪರಮೇಶ್ವರ್
ಶುಕ್ರವಾರ, 26 ಜನವರಿ 2018 (10:56 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಿಂಹ ಯಾರಾಗಬೇಕು ಎಂಬುದನ್ನು ಜನರು ತೀರ್ಮಾನ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯ ಬಳಿ ಧ್ವಜಾರೋಹಣದ ನಂತರ ಮಾತನಾಡಿದ ಅವರು, ಹುಲಿ, ಸಿಂಹ ಹಾಗೂ ಕಿರುಬಗಳನ್ನು ಸಾಕಷ್ಟು ನೋಡಿದ್ದೇವೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕೇಂದ್ರದ ಅನುದಾನ ಖರ್ಚಾಗಿರುವ ಬಗ್ಗೆ ಲೆಕ್ಕ ಕೇಳಲು ಅಮಿತ್ ಶಾ ಯಾರು? ಬಿಜೆಪಿ ಅಧ್ಯಕ್ಷರಿಗೆ ಲೆಕ್ಕ ಕೊಡಬೇಕಾ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರ ನಮ್ಮ ಪಾಲಿನ ಅನುದಾನ ಮಾತ್ರ ಕೊಟ್ಟಿದ್ದು ಹೊಸದಾಗಿ ಕೊಡುಗೆ ನೀಡಿಲ್ಲ ಎಂದಿದ್ದಾರೆ.
ಸಚಿವರ ಹಗರಣದ ದಾಖಲೆಗಳು ಇದ್ದರೆ ದೆಹಲಿಗೆ ತಲುಪಿಸಿದರೆ ಪ್ರಯೋಜನವೇನು? ರಾಜ್ಯದ ಜನರ ಮುಂದಿಡಲಿ. ಮುಖ್ಯಮಂತ್ರಿ ಅವರು ಬಹಿರಂಗ ಚರ್ಚೆ ಕರೆದಿದ್ದಾರೆ, ದಾಖಲೆಗಳಿದ್ದರೆ ತನ್ನಿ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.