ಮಹಿಳೆಯನ್ನು ಕೊಂದು ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಪಾಪಿ!

ಶುಕ್ರವಾರ, 13 ಮೇ 2022 (11:27 IST)
ಹೈದರಾಬಾದ್: ತನ್ನ ನೆರೆಮನೆಯ ಮಹಿಳೆಯನ್ನು ಕೊಂದು ಆಕೆಯ ಮೃತದೇಹದೊಂದಿಗೆ ಅತ್ಯಾಚಾರ ನಡೆಸಿದ ಹೀನ ಕೃತ್ಯಕ್ಕೆ 25 ವರ್ಷದ ಯುವಕನನ್ನು ಬಂಧಿಸಲಾಗಿದೆ.

ತೆಲಂಗಾಣದಲ್ಲಿ ಇಂತಹ ವಿಲಕ್ಷಣ ಘಟನೆ ನಡೆದಿದೆ. ಮಹಿಳೆ ಆರೋಪಿಯ ಪಕ್ಕದ ಗೋಡೌನ್ ನಲ್ಲಿ ಗಂಡನೊಂದಿಗೆ ವಾಸವಿದ್ದಳು. ಮಹಿಳೆಯ ಮನೆಗೆ ನುಗ್ಗಿದ ಆರೋಪಿ ಆಕೆ ಮೇಲೆ ಕೊಲೆ ಮಾಡುವುದಾಗಿ ಬೆದರಿಸಿ ಅತ್ಯಾಚಾರ ನಡೆಸಿದ್ದ. ಬಳಿಕ ಅತ್ಯಾಚಾರವೆಸಗಿ ಆಕೆಯ ಕೊಲೆ ಮಾಡಿ ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ.

ಬಳಿಕ ಆಕೆಯ ಮೈಮೇಲಿದ್ದ ಚಿನ್ನದ ಆಭರಣಗಳನ್ನು ಕಿತ್ತು ಪರಾರಿಯಾಗಿದ್ದ. ಮಹಿಳೆಯ ಗಂಡ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ