ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಜೀವ ತೆಗೆದ ಪಾಪಿ

ಭಾನುವಾರ, 29 ನವೆಂಬರ್ 2020 (09:43 IST)
ಲಕ್ನೋ: ತನ್ನ ಜತೆ ಪ್ರೇಮ ಸಂಬಂಧ ನಿರಾಕರಿಸಿದ್ದಕ್ಕೆ ಪಾಪಿ ಯುವಕನೊಬ್ಬ 18 ವರ್ಷದ ಯುವತಿಯ ಪ್ರಾಣ ಹರಣ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ನೆರೆಮನೆಯಾತನೇ ಆರೋಪಿ. ಈತ ಯುವತಿಯನ್ನು ಪ್ರೇಮಿಸುವಂತೆ ಕಾಟ ಕೊಡುತ್ತಿದ್ದ. ಆದರೆ ಯುವತಿ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡಿದ್ದ ಈತ ಸಮಯಕ್ಕಾಗಿ ಹೊಂಚು ಹಾಕಿ ಕುಳಿತಿದ್ದ. ಯುವತಿ ತನ್ನ ಗೆಳತಿಯರೊಂದಿಗೆ ಹೊಲಕ್ಕೆ ಕೆಲಸಕ್ಕೆ ಬಂದಾಗ ಅಲ್ಲಿ ಚಾಕು ಹಿಡಿದು ನಿಂತಿದ್ದ ಆರೋಪಿ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ತೀವ್ರ ಗಾಯಗೊಂಡ ಯುವತಿ ಮೃತಪಟ್ಟಿದ್ದಾಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ