ಮೊದಲ ಪತ್ನಿಯನ್ನು ನೋಡಿ ಮದುವೆ ಮನೆಯಿಂದ ಓಟಕಿತ್ತ ವರ!
ಮೊದಲನೇ ಮದುವೆ ಮುಚ್ಚಿಟ್ಟು ವರ ಮಹಾಶಯ ಮತ್ತೊಂದು ಮದುವೆಯಾಗಲು ಯತ್ನಿಸಿದ್ದ. ಆದರೆ ವರನ ದಿಬ್ಬಣ ಮುಗಿದ ಮೇಲೆ ಮೊದಲನೇ ಪತ್ನಿ ತನ್ನ ಮಗುವಿನೊಂದಿಗೆ ಸರಿಯಾದ ಸಮಯಕ್ಕೆ ಮಂಟಪಕ್ಕೆ ಬಂದಿದ್ದಳು.
ಮೊದಲನೇ ಹೆಂಡತಿಯ ಕೈಯಲ್ಲಿ ಸಿಕ್ಕಿ ಹಾಕಿಕೊಂಡ ತಕ್ಷಣ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲಿದ್ದವರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ಮುಂದೆ ಮೊದಲನೇ ಹೆಂಡತಿ ವರನಿಗೆ ತನ್ನ ಜೊತೆಗೆ ಈ ಮೊದಲೇ ಮದುವೆಯಾಗಿದ್ದ ವಿಚಾರವನ್ನು ಹೇಳಿದ್ದಾಳೆ. ಬಳಿಕ ಪೊಲೀಸರು ವರನನ್ನು ಬಂಧಿಸಿದ್ದಾರೆ.