ಸೋನಿಯಾ ಗಾಂಧಿಯನ್ನು ‘ವಿದೇಶಿ’ ಎಂದಿದ್ದಕ್ಕೆ ತನ್ನ ಪಕ್ಷದ ನಾಯಕನಿಗೆ ಮಾಯಾವತಿ ನೀಡಿದ ಶಿಕ್ಷೆಯೇನು ಗೊತ್ತಾ?!
‘ರಾಹುಲ್ ಗಾಂಧಿ ತಮ್ಮ ತಂದೆಗಿಂತ ತಾಯಿ ಸೋನಿಯಾರನ್ನೇ ಹೆಚ್ಚು ಹೋಲುತ್ತಾರೆ. ಸೋನಿಯಾ ವಿದೇಶಿ. ಹಾಗಾಗಿ ರಾಹುಲ್ ಪ್ರಧಾನಿಯಾಗಲು ಸಾಧ್ಯವಿಲ್ಲ’ ಎಂದು ಮಾಯಾವತಿ ಅವರ ಬಿಎಸ್ ಪಿ ಪಕ್ಷದ ರಾಷ್ಟ್ರೀಯ ಸಂಯೋಜಕ ಜೈ ಪ್ರಕಾಶ್ ಸಿಂಗ್ ಹೇಳಿಕೆ ನೀಡಿದ್ದರು.
ಜೈ ಪ್ರಕಾಶ್ ಸಿಂಗ್ ವಿವಾದಿತ ಹೇಳಿಕೆಗೆ ಕ್ರುದ್ಧರಾಗಿರುವ ಮಾಯಾವತಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಬಿಎಸ್ ಪಿ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದಕ್ಕೆ ಈ ಶಿಕ್ಷೆ ನೀಡಲಾಗಿದೆ ಎಂದು ಮಾಯಾವತಿ ಹೇಳಿದ್ದಾರೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಜತೆಗೂಡಿ ಮೈತ್ರಿಗೆ ಮುಂದಾಗಿರುವ ಬೆನ್ನಲ್ಲೇ ತಮ್ಮ ಪಕ್ಷದ ನಾಯಕನ ಹೇಳಿಕೆ ಮಾಯಾವತಿ ಸಿಟ್ಟಿಗೆ ಕಾರಣವಾಗಿದೆ.