ತಮ್ಮ ಪವನ್ ಕಲ್ಯಾಣ್ ಪಕ್ಷಕ್ಕೆ ₹ 5 ಕೋಟಿ ಗಿಫ್ಟ್ ಕೊಟ್ಟ ಮೆಗಾಸ್ಟಾರ್ ಚಿರಂಜೀವಿ
ಈ ಸಂದರ್ಭದಲ್ಲಿ ಚಿರಂಜೀವಿ ಅವರು ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಆಶೀರ್ವಾದವಾಗಿ ₹ 5 ಕೋಟಿ ಚೆಕ್ ಅನ್ನು ಹಸ್ತಾಂತರಿಸಿದರು. ಭಾವುಕರಾದ ಪವನ್ ಕಲ್ಯಾಣ್ ಅವರು ತಮ್ಮ ಹಿರಿಯ ಸಹೋದರ ಚಿರಂಜೀವಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು. ಸಹೋದರರು ಕೆಲಹೊತ್ತು ಮಾತುಕತೆಯಲ್ಲಿ ತೊಡಗಿದರು.
ನಿನ್ನೆ ಅನಕಾಪಲ್ಲಿಯಲ್ಲಿ ನಡೆದ ವಾರಾಹಿ ಸಮಾವೇಶದಲ್ಲಿ ಪವನ್ ಕಲ್ಯಾಣ್ ಪಾಲ್ಗೊಂಡಿದ್ದರು. ದೇವಿಯ ಆಶೀರ್ವಾದ ಕೋರಿ ಸಭೆಯಲ್ಲಿ ಪವನ್ ಕಲ್ಯಾಣ್ ಅವರು ಆಡಿದ ಕೆಲ ಮಾತುಗಳು ಚಿರಂಜೀವಿ ಅವರನ್ನು ಮನಸ್ಸನ್ನು ಕದಲಿಸಿದೆ. ಈ ನಿಟ್ಟಿನಲ್ಲಿ ಆರ್ಥಿಕವಾಗಿ ಪ್ರೇರೆಪಿಸುವ ನಿಟ್ಟಿನಲ್ಲಿ ಸಹೋದರ ಗಿಫ್ಟ್ ರೂಪದಲ್ಲಿ ದೇಣಿಗೆ ನೀಡಿದ್ದಾರೆ.