ಕೆಲಸ ಕೇಳಿ ಬಂದ ಹುಡುಗಿಯನ್ನು ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡ ವ್ಯಕ್ತಿ
ಶನಿವಾರ, 16 ಜನವರಿ 2021 (07:58 IST)
ಲಕ್ನೋ : 16 ವರ್ಷದ ನೇಪಾಳಿ ಹುಡುಗಿಯನ್ನು ಬೇರೆ ಬೇರೆ ಪುರುಷರಿಗೆ ಮಾರಾಟ ಮಾಡಿ 1 ವರ್ಷಗಳ ಕಾಲ ಆಕೆಯನ್ನು ಕೂಡಿಹಾಕಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಸಂತ್ರಸ್ತೆ ಉದ್ಯೋಗ ಹುಡುಕಿಕೊಂಡು ಲಕ್ನೋಗೆ ಬಂದಿದ್ದಾಳೆ. ಅಲ್ಲಿ ಆರೋಪಿ ಆಕೆಗೆ ಕೆಲಸ ಕೊಡಿಸುವ ನೆಪದಲ್ಲಿ ಮನೆಗೆ ಕರೆದೊಯ್ದು ಮಾನಭಂಗ ಎಸಗಿದ್ದಾನೆ, ಬಳಿಕ ಆಕೆಯನ್ನು ಮಾರಾಟ ಮಾಡಿದ್ದಾನೆ. ಹುಡುಗಿ ಆತನಿಂದ ತಪ್ಪಿಸಿಕೊಂಡು ಬಂದು ತನ್ನ ಮನೆಯವರಿಗೆ ತಿಳಿಸಿದ್ದಾಳೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಗರ್ಭಿಣಿ ಎಂಬುದು ತಿಳಿದುಬಂದಿದೆ.
ಈ ಬಗ್ಗೆ ತಾಯಿ ಮತ್ತು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರೋಪಿಗಳನ್ನು ಬಂಧಿಸಿದ್ದಾರೆ.