ಮಾನಸಿಕ ಅಸ್ವಸ್ಥನೊಬ್ಬ ಸೆಕ್ಸ್ ಮಾಡಿದ್ದು ಯಾವುದರ ಜತೆ ಗೊತ್ತಾ…?

ಶುಕ್ರವಾರ, 19 ಜನವರಿ 2018 (06:42 IST)
ಗುಜರಾತ್ : ಗುಜರಾತ್ ನ ವಡೋದರಾದ ವರ್ನಾಮಾ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಹಸುಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದು, ಒಂದು ಹಸು ಸಾವನಪ್ಪಿದ ಘಟನೆ ನಡೆದಿದೆ.


ರಥೋಡಿಯಾ ಎಂಬ ವ್ಯಕ್ತಿ ಈ ಕೃತ್ಯ ಮಾಡಿರುವುದಾಗಿ ತಿಳಿದುಬಂದಿದ್ದು, ಆತನನ್ನು ವರ್ನಾಮ ಪೊಲೀಸರು ಬಂಧಿಸಿದ್ದಾರೆ. ಹಸುಗಳ ಮಾಲೀಕ ಲಾಲ್ ಜಿ ರಾಬಾರಿ ಬೆಳಿಗ್ಗೆ ಹಸುಗಳ ಕೊಟ್ಟಿಗೆಗೆ ಬಂದು ನೋಡಿದಾಗ ಮೂರು ಹಸುಗಳ ಕಾಲನ್ನು ಕಟ್ಟಿಹಾಕಿದ್ದು, ನಾಲ್ಕನೇ ಹಸು ಸಾವನಪ್ಪಿತ್ತು. ಇದನ್ನು ನೋಡಿದಾಗ ಅವರಿಗೆ ಹಸುಗಳ ಮೇಲೆ ಲೈಂಗಿಕ ಕ್ರಿಯೆ ನಡೆದಿದ್ದು, ಅದು ತಮ್ಮ ಕೆಲಸಗಾರ ರಥೋಡಿಯಾ ಮಾಡಿರುವುದಾಗಿ  ಅನುಮಾನ ಬಂದಿತ್ತು. ಏಕೆಂದರೆ ಆತ ಹಿಂದೊಮ್ಮೆ ಕರುವಿನ ಮೇಲೆ ಇದೇ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದನ್ನು ತಿಳಿದಿದ್ದ ಮಾಲೀಕ  ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಆತ ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ