ವಿಜಯ್ ಮಲ್ಯ ಥರಾ ಸ್ಮಾರ್ಟ್ ಆಗಿರಿ! ಹೀಗಂತ ಸಲಹೆ ಕೊಟ್ಟ ಕೇಂದ್ರ ಸಚಿವ!
ಬುಡಕಟ್ಟು ಜನಾಂಗದ ಉದ್ಯಮ ಮೇಳದಲ್ಲಿ ಮಾತನಾಡಿದ ಸಚಿವರು ಇಂತಹದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬ್ಯಾಂಕ್ ಸಾಲದ ಸದುಪಯೋಗಪಡಿಸಿಕೊಳ್ಳಲು ಸಚಿವರು ಮಲ್ಯ ಉದಾಹರಣೆ ನೀಡಿದ್ದಾರೆ.
‘ನೀವೆಲ್ಲರೂ ವಿಜಯ್ ಮಲ್ಯರನ್ನು ದೂಷಿಸುತ್ತೀರಿ. ಆದರೆ ವಿಜಯ್ ಮಲ್ಯ ಅಂದರೇನು? ಅವರು ತುಂಬಾ ಸ್ಮಾರ್ಟ್. ಅವರು ಕೆಲವು ಬುದ್ಧಿವಂತರಿಗೆ ಕೆಲಸ ಕೊಟ್ಟರು. ಅವರು ಇಲ್ಲಿ ಕೆಲವು ಬ್ಯಾಂಕ್ ಗಳೊಂದಿಗೆ, ರಾಜಕಾರಣಿಗಳೊಂದಿಗೆ ಸರ್ಕಾರದೊಂದಿಗೆ ಸ್ಮಾರ್ಟ್ ಆಗಿ ವರ್ತಿಸಿದರು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.