ಮುತ್ತಿನನಗರಿಯಲ್ಲಿ ಮಗುವಿನ ಮೇಲೆ ಅತ್ಯಾಚಾರ

ಸೋಮವಾರ, 6 ಫೆಬ್ರವರಿ 2017 (08:37 IST)
5 ವರ್ಷದ ಪುಟ್ಟ ಮಗುವಿನ ಮೇಲೆ 15 ವರ್ಷದ ಬಾಲಕ ಅತ್ಯಾಚಾರ ಎಸಗಿದ ಹೇಯ ಘಟನೆ ಮುತ್ತಿನನಗರಿ ಹೈದರಾಬಾದಿನಲ್ಲಿ ನಡೆದಿದೆ. 

ಮೊಯ್ನಾಬಾದ್‌ನಲ್ಲಿ ಈ ಹೇಯ ಕೃತ್ಯ ನಡೆದಿದ್ದು ಆರೋಪಿ ಪೀಡಿತಳ ನೆರೆಮನೆ ವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 
 
ಬಾಲಕಿ ಪೋಷಕರು ನೀಡಿರುವ ದೂರಿನ ಪ್ರಕಾರ, 7ನೇ ತರಗತಿಯಲ್ಲಿ ಓದುತ್ತಿರುವ ಬಾಲಕ, ಭಾನುವಾರ ಮಧ್ಯಾಹ್ನ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಮನೆಗೆ ಹಿಂತಿರುಗಿದ ಬಾಲಕಿ ಆತ ನಡೆಸಿದ ಕೃತ್ಯವನ್ನೆಲ್ಲ ತಂದೆಯ ಬಳಿ ವಿವರಿಸಿದ್ದಾಳೆ. 
 
ಕಳೆದ ತಿಂಗಳು ಸಹ ಆತ ತನ್ನ ಜತೆ ಹೀಗೆಯೇ ನಡೆದುಕೊಂಡಿದ್ದ ಎಂದು ಏನೂ ಅರಿಯದ ಬಾಲಕಿ ವಿವರಿಸಿರುವುದಾಗಿ ಪೋಷಕರು ದೂರಿದ್ದಾರೆ. 
 
ಸಂಬಂಧಿತ ಐಪಿಸಿ ವಿಭಾಗಗಳು ಮತ್ತು ಪೋಸ್ಕೋ ಕಾಯಿದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. 
 
ಇನ್ನುವರೆಗೂ ಬಾಲಕನನ್ನು ಬಂಧಿಸಲಾಗಿಲ್ಲ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ