ಗುಜರಾತ್‌ ಚುನಾವಣೆ ಮತಗಳ ಎಣಿಕೆಯಲ್ಲಿ ದೋಷವಾಗಿದೆ ಎಂದ ಚುನಾವಣಾಧಿಕಾರಿ

ಗುರುವಾರ, 21 ಡಿಸೆಂಬರ್ 2017 (15:23 IST)
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಗಳು ಮತ್ತು ಕನಿಷ್ಠ ನಾಲ್ಕು ಮತಗಟ್ಟೆಗಳಲ್ಲಿನ ಕಾಗದದ ಎಣಿಕೆಗಳ ನಡುವಿನ ಅಂಕಿಗಳು ಹೊಂದಾಣಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ಒಪ್ಪಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಚುನಾವಣಾಧಿಕಾರಿ ಬಿಬಿ ಸ್ವೈನ್ ಆಘಾತಕಾರಿ ಮತಯಂತ್ರಗಳ ದೋಷವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರೂ ಯಾವುದೇ ಖಾಸಗಿ ಚಾನೆಲ್‌ಗಳು ಸುದ್ದಿಯನ್ನು ಬಹಿರಂಗಪಡಿಸದಿರುವುದು ಮತ್ತಷ್ಟು ಆಘಾತ ತಂದಿದೆ ಎನ್ನಲಾಗಿದೆ.
 
ಮತಯಂತ್ರಗಳ ದೋಷವನ್ನು ಬಿತ್ತರಿಸದ ಮಾಧ್ಯಮಗಳು ಮತಯಂತ್ರಗಳು ವಿವಿಪ್ಯಾಟ್‌ನೊಂದಿಗೆ ಶೇ.100 ರಷ್ಟು ಹೊಂದಾಣಿಕೆಯಾಗಿವೆ ಎಂದು ಪ್ರಚಾರ ನೀಡಿ ತಮ್ಮ ಪಕ್ಷಪಾತ ಧೋರಣೆಯನ್ನು ತೋರಿ ಮಾಧ್ಯಮ ವೃತ್ತಿಗೆ ಮಸಿಬಳೆದ ಘಟನೆ ನಡೆದಿದೆ ಎಂದು ವಿಪಕ್ಷಗಳು ತಿರುಗೇಟು ನೀಡಿವೆ.
 
ಚುನಾವಣಾ ಆಯೋಗವು ಮತಗಳನ್ನು ಸರಿಹೊಂದಿಸುವ ಪರೀಕ್ಷೆ ನಡೆಸಲು ಪ್ರತಿ ಕ್ಷೇತ್ರದ ಒಂದು ಮತಗಟ್ಟೆಯನ್ನು ಆಯ್ಕೆ ಮಾಡಿಕೊಂಡಿರುತ್ತದೆ. ಇವಿಎಂಗಳಲ್ಲಿರುವ ಮತಗಳು ವಿವಿಪ್ಯಾಟ್‌ನಲ್ಲಿರುವ ಮತಗಳೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ. ಮತ ಎಣಿಕೆಯಲ್ಲಿ ದೋಷವಾಗಿದೆ ಎಂದು ಸ್ವತಃ ಚುನಾವಣಾಧಿಕಾರಿ ಹೇಳಿಕೆ ನೀಡಿರುವುದು ವಿಪಕ್ಷಗಳಿಗೆ ಮತ್ತೊಂದು ಅಸ್ತ್ರ ದೊರೆತಂತಾಗಿದೆ.
 
ವಿ.ವಿ.ಪಿ.ಟಿ. ಪರಿಶೀಲನಾ ಪ್ರಕ್ರಿಯೆಗಳೊಂದಿಗೆ ಇಸಿ ಅಳವಡಿಸಿಕೊಂಡ ಗೌಪ್ಯತೆ ಮತ್ತು ಪಾರದರ್ಶಕತೆಯ ಕಾರಣದಿಂದ ಈ ತಪ್ಪು ಹೊಂದಾಣಿಕೆಯ ನಿಜಾಂಶವನ್ನು ಪರಿಶೀಲಿಸಲಾಗುವುದಿಲ್ಲ. ಫಲಿತಾಂಶವನ್ನು ಘೋಷಿಸುವ ಮೊದಲು ಅಭ್ಯರ್ಥಿಗಳು ಮತ್ತು ಎಣಿಕೆ ಏಜೆಂಟ್‌ಗಳ ಮುಂದೆ ಇಂತಹ ಪರಿಶೀಲನೆ ಎಣಿಕೆ ಮಾಡುವುದು ಇಸಿ ಸಂವಿಧಾನಾತ್ಮಕ ಕರ್ತವ್ಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ