ನಾಪತ್ತೆಯಾಗಿದ್ದ ಸೋನಿಯಾ ಗಾಂಧಿ ಎಸ್`ಪಿಜಿ ಕಮಾಂಡೋ ಪತ್ತೆ

ಗುರುವಾರ, 7 ಸೆಪ್ಟಂಬರ್ 2017 (12:18 IST)
ಸೆಪ್ಟೆಂಬರ್ 1ರಿಂದ ನಾಪತ್ತೆಯಾಗಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಎಸ್`ಪಿಜಿಯ ಪೇದೆ ರಾಕೇಶ್ ವರ್ಮಾ ದೆಹಲಿಯಲ್ಲೇ ಪತ್ತೆಯಾಗಿದ್ದಾನೆ. ತಿಲಕ್ ಮಾರ್ಗ್ ಪ್ರದೇಶದಲ್ಲಿ ಅನ್ನ, ನೀರಿಗಾಗಿ ಸ್ಥಳೀಯರ ಬಳಿ ಬೇಡುತ್ತಿದ್ದಾಗ ವ್ಯಕ್ತಿಯೊಬ್ಬ ಈತನನ್ನ ಗಮನಿಸಿದ್ದಾನೆ. ಆತನ ಬಳಿಕ ಎಸ್`ಪಿಜಿ ಐಡಿ ಕಾರ್ಡ್ ಕಂಡು ಕಂಟ್ರೋಲ್ ರೂಮ್`ಗೆ ಮಾಹಿತಿ ನೀಡಿದ್ದಾನೆ.

ರಾಕೇಶ್ ವರ್ಮಾರನನ ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಚಿಕಿತ್ಸೆ ಕೊಡಿಸಿದ ಬಳಿಕ ಅವರ ಮನೆಗೆ ತಲುಪಿಸಿದ್ಧಾರೆ. ರಾಕೇಶ್ ಶರ್ಮಾ ಆರ್ಥಿಕ ಸಮಸ್ಯೆಯಿಂದ ಒದ್ದಾಡುತ್ತಿದ್ದು, 4 ಲಕ್ಷ ರೂ. ಸಾಲ ಮಾಡಿದ್ದನಂತೆ. ಅದಕ್ಕಾಗಿ 40 ಸಾವಿರ ರೂ. ಕಂತನ್ನ ಕಟ್ಟಿದ್ದರಂತೆ. ಹೀಗಾಗಿ, ಬರಿಗೈಯಲ್ಲಿ ಮನೆಗೆ ತೆರಳಲಾಗದೇ ಖಿನ್ನತೆಯಿಂದ ಬೀದಿಯಲ್ಲೇ ಉಳಿದಿದ್ದರೆಂದು ವರದಿಯಾಗಿದೆ.

ಸೆಪ್ಟೆಂಬರ್ 1ರಂದು ವಾರದ ರಜೆ ಇದ್ದರೂ ರಾಕೇಶ್ ವರ್ಮಾ ಕೆಲಸಕ್ಕೆ ತೆರಳಿದ್ದರು. ಸಂಜೆಯಾದರೂ ವಾಪಸ್ ಬರದಿದ್ದಾಗ ಕೆಸಲದ ಸಮಯ ವಿಸ್ತರಣೆಯಾಗಿದ್ದಿರಬಹುದೆಂದು ಕುಟುಂಬ ಸದಸ್ಯರು ಭಾವಿಸಿದ್ದರು. ಮಾರನೇ ದಿನ ಕರೆ ಮಾಡಿದಾಗಲೂ ಉತ್ತರ ಬರಲಿಲ್ಲ. ಫೋನ್ ನೆಟ್ವರಕ್ ಇಲ್ಲದಿರಬಹುದೆಂದು ಆಗಲೂ ಕುಟುಂಬ ಸದಸ್ಯರು ಸುಮ್ಮನಾಗಿದ್ದಾರೆ. 2 ದಿನಗಳಾದರೂ ರಾಕೇಶ್ ಮನೆಗೆ ವಾಪಸ್ ಆಗಿದ್ದಾಗ 10 ಜನಪಥ್`ಗೆ ತೆರಳಿ ವಿಚಾರಿಸಿದಾಗ ರಾಕೇಶ್ ನಾಪತ್ತೆ ವಿಷಯ ಗೊತ್ತಾಗಿದೆ. ಹೀಗಾಗಿ,  ಸೆಪ್ಟೆಂಬರ್ 3ರಂದು ಪೊಲೀಸ್ ಠಾಣೆಗೆ ರಾಕೇಶ್ ಕುಟುಂಬ ಸದಸ್ಯರು ದೂರು ನೀಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ