ಐದು ಎಕರೆಯೊಳಗಿನ ಜಮೀನು ಹೊಂದಿರುವ ಯಾವುದೇ ಸರ್ಕಾರಿ ಹುದ್ದೆ ಅಥವಾ ಆದಾಯ ತೆರಿಗೆ ಪಾವತಿ ಮಾಡದ ರೈತರಿಗೆ ಮೋದಿ ಸರ್ಕಾರ ಪ್ರೋತ್ಸಾಹ ಧನವಾಗಿ 6,000 ರೂ. ನೀಡುತ್ತಿದೆ. ಈ ಪೈಕಿ ಇದುವರೆಗೆ 17 ಕಂತುಗಳನ್ನು ಬಿಡುಗಡೆ ಮಾಡಲಾಗಿತ್ತು. ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗಿತ್ತು.
ಇತ್ತೀಚೆಗಷ್ಟೇ ಅಕ್ಟೋಬರ್ ಮೊದಲ ವಾರದಲ್ಲಿ ಕಿಸಾನ್ ಸಮ್ಮಾನ್ ನಿಧಿಯ 18 ನೇ ಕಂತು ಬಿಡುಗಡೆಯಾಗಲಿದೆ ಎಂದು ಸೂಚನೆ ಸಿಕ್ಕಿತ್ತು. ಅದರಂತೆ ಈಗ ಕೇಂದ್ರ ಸರ್ಕಾರ ಫಲಾನುಭವಿ ರೈತರ ಖಾತೆಗೆ 18 ನೇ ಕಂತಿನ ಹಣ ಜಮೆ ಮಾಡಿದೆ. ಸುಮಾರು 9.5 ಕೋಟಿ ರೈತರ ಖಾತೆಗೆ 20,000 ಕೋಟಿ ಹಣ ಜಮೆ ಮಾಡಲಾಗಿದೆ.
ಈ ಯೋಜನೆಯಡಿ ಕಳೆದ 17 ಕಂತುಗಳಲ್ಲಿ 74,492.71 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿತ್ತು. ಮೋದಿ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಇದೊಂದು ಆಗಿದ್ದು, 2019 ರಲ್ಲಿ ರೈತರನ್ನು ಆರ್ಥಿಕವಾಗಿ ಸಶಕ್ತರಾಗಿ ಮಾಡುವ ಉದ್ದೇಶದಿಂದ ಜಾರಿಗೆ ತರಲಾಗಿತ್ತು.