21 ರಿಂದ 24 ವರ್ಷದೊಳಗಿನ ಇಂಟರ್ನ್ ಶಿಪ್ ಮಾಡುವ ಕನಿಷ್ಠ 10 ನೇ ತರಗತಿ ಪೂರ್ಣಗೊಳಿಸಿರುವ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದು. ಅಥವಾ ಐಐಟಿ, ಡಿಪ್ಲೊಮಾ, ಬಿಎ, ಬಿಎಸ್ ಸಿ ಅಥವಾ ಬಿಕಾಂ ಪದವೀಧರರೂ ಸಲ್ಲಿಸಬಹುದು. ಸರ್ಕಾರಿ ಉದ್ಯೋಗದಲ್ಲಿರುವ ಕುಟುಂಬದವರು, ಆದಾಯ ತೆರಿಗೆ ಸಲ್ಲಿಸುವವರು ಅರ್ಜಿ ಸಲ್ಲಿಸುವ ಹಾಗಿಲ್ಲ. ಅಕ್ಟೋಬರ್ 12 ರಿಂದ 25 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ. ಅಕ್ಟೋಬರ್ 26 ರಂದು ಅರ್ಹ ಅರ್ಜಿಗಳ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಅಕ್ಟೋಬರ್ 27 ರಿಂದ ನವಂಬರ್ 7 ರವರೆಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ನವಂಬರ್ 15 ರಿಂದ ಆಯ್ಕೆಯಾದ ಅಭ್ಯರ್ಥಿಗಳು ಕಂಪನಿಗಳಿಂದ ಆಫರ್ ಲೆಟರ್ ಪಡೆಯಲಿದ್ದಾರೆ. ಕೇಂದ್ರ ಸರ್ಕಾರದಿಂದ 4,500 ರೂ. ಮತ್ತು ಕಂಪನಿಗಳಿಂದ 5,000 ರೂ. ವೇತನ ಸಿಗಲಿದೆ.
https://pminternship.mca.gov.in/login/ ಎಂಬ ವೆಬ್ ಸೈಟ್ ನಲ್ಲಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.