ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮೋದಿ, ಪಿಣರಾಯಿ, ಅದಾನಿ, ತರೂರ್‌: ಏನು ವಿಶೇಷ ಗೊತ್ತಾ

Sampriya

ಶುಕ್ರವಾರ, 2 ಮೇ 2025 (15:58 IST)
Photo Courtesy X
ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸದಾ ಟೀಕಿಸುತ್ತಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಇಂದು ಮೋದಿ ಪಕ್ಕದಲ್ಲೇ ಕೂತು ಮಾತುಕತೆ ನಡೆಸಿದ್ದಾರೆ. ಇವರಿಬ್ಬರಿಗೆ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ತಿರುವನಂತಪುರದ ಕಾಂಗ್ರೆಸ್‌ ಸಂಸದ ಶಶಿ ತರೂರ್ ಸಾಥ್‌ ನೀಡಿದ್ದಾರೆ.

ಇದು ನಡೆದಿರುವುದು ಕೇರಳದ ತಿರುವನಂತಪುರದಲ್ಲಿ ಅದಾನಿ ಸಮೂಹ ಸಂಸ್ಥೆ ಅಭಿವೃದ್ಧಿಪಡಿಸಿರುವ ವಿಳಿಂಜಂ ಬಂದರು ಉದ್ಘಾಟನೆ ಸಮಾರಂಭದಲ್ಲಿ. ಈ ಐತಿಹಾಸಿಕ ಬಂದರಿನ ಮೊದಲ ಹಂತದ ಸೌಲಭ್ಯವನ್ನು ಪ್ರಧಾನಿಯವರು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಹಸ್ತಾಂತರಿಸಿದ್ದಾರೆ. ವಿಳಿಂಜಂ ಬಂದರಿನ ಎರಡನೇ ಹಂತದ ಯೋಜನೆಗೂ ಮೋದಿ ಚಾಲನೆ ನೀಡಿದ್ದಾರೆ. 

ಅದಾನಿ ಸಮೂಹಕ್ಕೆ ಸೇರಿದ ಅದಾನಿ ಪೋರ್ಟ್ಸ್ (ಎಪಿಎಸ್​​ಇಝಡ್) ಈ ಆಳ ನೀರಿನ ಬಂದರನ್ನು ಅಭಿವೃದ್ಧಿಪಡಿಸಿದೆ. ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ನಡೆದ ಈ ಯೋಜನೆಯ ವೆಚ್ಚ ₹8,000 ಕೋಟಿ ಆಗಿದೆ.

ವಿಳಿಂಜಂ ಅಂತರರಾಷ್ಟ್ರೀಯ ಬಂದರು ಭಾರತದ ಮೊದಲ ಟ್ರಾನ್ಸ್​​ಶಿಪ್​​ಮೆಂಟ್ ಪೋರ್ಟ್ (ಹಡಗಿನಿಂದ ಹಡಗಿಗೆ ಸರಕು ಸಾಕಿಸುವ ಬಂದರು) ಆಗಿರುವುದು ವಿಶೇಷ. ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಹಡಗು ಸಾಗಣೆಯಲ್ಲಿ ಭಾರತಕ್ಕೆ ಒಂದು ಮಹತ್ವದ ಪಾತ್ರ ಸಿಕ್ಕಂತಾಗುತ್ತದೆ. ಈ ಯೋಜನೆಯು ನವಯುಗದ ಅಭಿವೃದ್ಧಿಯ ಸಂಕೇತ ಎಂದು ಮೋದಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ