ಮಂಗನ ಕೈಲಿ ಮಾಣಿಕ್ಯ! ಸ್ಮಾರ್ಟ್ ಫೋನ್ ನೋಡೋದರಲ್ಲಿ ಬ್ಯುಸಿಯಾದ ವಾನರಗಳು!
ಮೂರು ಮಂಗಗಳು ಸ್ಮಾರ್ಟ್ ಫೋನ್ ನಲ್ಲಿ ಸೋಷಿಯಲ್ ಮೀಡಿಯಾವನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಓರ್ವ ವ್ಯಕ್ತಿ ಮಂಗಗಳ ಮುಂದೆ ಸ್ಮಾರ್ಟ್ ಫೋನ್ ಹಿಡಿದಿದ್ದಾನೆ. ಮಂಗಗಳು ಸ್ಕ್ರೀನ್ ಮೇಲೆ ಥೇಟ್ ಮನುಷ್ಯರಂತೇ ಕೈಯಾಡಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ, ಫೋಟೋಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಮಂಗಗಳಿಗೂ ಸ್ಮಾರ್ಟ್ ಫೋನ್ ಗೀಳು ಶುರುವಾಗಿದೆ ಎಂದು ತಮಾಷೆ ಮಾಡಿದ್ದಾರೆ.