ಯುವಕನ ಬೆತ್ತಲೆ ವಿಡಿಯೋ ಮಾಡಿ ಹಣ ದೋಚಿದ ಮಾಯಾಂಗನೆ

ಸೋಮವಾರ, 11 ಜುಲೈ 2022 (09:40 IST)
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಪುರಷರಿಂದ ಮಹಿಳೆಯರು ವಂಚನೆಗೊಳಗಾಗುವ ಎಷ್ಟೋ ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಇಲ್ಲಿ ಯುವತಿಯೇ ಯುವಕನಿಗೆ ಟೋಪಿ ಹಾಕಿದ್ದಾಳೆ!

ಫೇಸ್ ಬುಕ್ ನಲ್ಲಿ ಯುವಕನೊಬ್ಬನನ್ನು ಪರಿಚಯ ಮಾಡಿಕೊಂಡಿದ್ದ ಯುವತಿ ಬಳಿಕ ವ್ಯಾಟ್ಸಪ್ ಮೂಲಕ ಚ್ಯಾಟಿಂಗ್, ವಿಡಿಯೋ ಕಾಲ್ ಮಾಡುತ್ತಿದ್ದರು. ವಿಡಿಯೋ ಕಾಲ್ ವೇಳೆ ತಾನೂ ಬೆತ್ತಲಾಗಿ, ಯುವಕನಿಗೂ ಬೆತ್ತಲಾಗಲು ಪ್ರೇರೇಪಿಸಿದ್ದ ಯುವತಿ ಅವುಗಳ ವಿಡಿಯೋ ಮಾಡಿಕೊಂಡಿದ್ದಳು.

ಬಳಿಕ ಈ ವಿಡಿಯೋವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ 5 ಲಕ್ಷ ರ.ೂಗೆ ಬೇಡಿಕೆಯಿಟ್ಟಿದ್ದಾಳೆ. ಆದರೆ ಆತ ಕಿವಿಗೊಡದೇ ಇದ್ದಾಗ ಇನ್ನೊಬ್ಬ ವ್ಯಕ್ತಿಯ ಮೂಲಕ ಕರೆ ಮಾಡಿಸಿ ನಾನು ಸಿಬಿಐ ಅಧಿಕಾರಿ, ನಿಮ್ಮ ಹೆಸರು ಬರೆದಿಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಲಾಗಿದೆ. ಇದರಿಂದ ಬೆದರಿದ ಯುವಕ ಹಣ ನೀಡಿದ್ದಾನೆ. ಆ ಬಳಿಕವೂ ಬ್ಲ್ಯಾಕ್ ಮೇಲ್ ಮುಂದುವರಿದಾಗ ಪೊಲೀಸರಿಗೆ ದೂರು ನೀಡಿದ್ದಾನೆ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ