ಸಂಸತ್ ಮಳೆಗಾಲದ ಅಧಿವೇಶನ ಜುಲೈ 17ರಿಂದ ಆರಂಭ

ಶನಿವಾರ, 24 ಜೂನ್ 2017 (14:10 IST)
ನವದೆಹಲಿ: ಜುಲೈ 17ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಜುಲೈ 17ರಂದು ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯಲಿದ್ದು ಈ ಮೂಲಕ ಅಧಿವೇಶ ಆರಂಭವಾಗಲಿದೆ. 
 
ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಜು.17ರಿಂದ ಆ.11ರ ವರೆಗೆ ಮುಂಗಾರು ಅಧಿವೇಶನ ನಡೆಸಬೇಕೆಂದು ಶಿಫಾರಸು ಮಾಡಿದೆ ಎಂದು ಸಮಿತಿ ತಿಳಿಸಿವೆ. 
 
ಈಗಾಗಲೇ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ ಕೋವಿಂದ ಅವರು ನಾಮಪತ್ರ ಸಲ್ಲಿಸಿದ್ದು, ಈ ನಡುವೆ ಗೃಹ ಸಚಿವ ರಾಜನಾಥ ಸಿಂಗ್‌  ಸಿಸಿಪಿಎ ಸಭೆಯನ್ನು ನಡೆಸಿ, ಸಂಸತ್ತಿನ ಮುಂಗಾರು ಅಧಿವೇಶನದ ವೇಳಾಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಅಗಲಿದ ಲೋಕಸಭಾ ಸದಸ್ಯ. ಬಾಲಿವುಡ್‌ ನಟ ವಿನೋದ್‌ ಖನ್ನಾ ಮತ್ತು ರಾಜ್ಯಸಭಾ ಸದಸ್ಯೆ ಪಲ್ಲವಿ ರೆಡ್ಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಬಳಿಕ ಮುಂಗಾರು ಅಧಿವೇಶನ ಮುಂದಿನ ದಿನಕ್ಕೆ ಮುಂದೂಡಲ್ಪಡಲಿದೆ. 
 

ವೆಬ್ದುನಿಯಾವನ್ನು ಓದಿ