ಅಂಡಾಣು ದಾನಕ್ಕೆ ಮಗಳಿಗೆ ಬಲವಂತ ಮಾಡಿದ ತಾಯಿ ಅರೆಸ್ಟ್
ಇದೇ ರೀತಿ ತಾಯಿಯೊಬ್ಬಳು ತನ್ನ 16 ವರ್ಷದ ಮಗಳಿಗೆ ದುಡ್ಡಿನಾಸೆಗೆ ಅಂಡಾಣು ದಾನ ಮಾಡಲು ಬಲವಂತ ಮಾಡಿದ್ದಕ್ಕೆ ಬಂಧನಕ್ಕೊಳಗಾಗಿದ್ದಾಳೆ. ತಮಿಳುನಾಡಿನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.
ತಾಯಿಯೇ ಖಾಸಗಿ ಸಂಸ್ಥೆಯೊಂದಕ್ಕೆ ಮಗಳ ಅಂಡಾಣು ದಾನಕ್ಕೆ ಬಲವಂತ ಮಾಡಿದ್ದಾಳೆ. ತಾಯಿ ಎರಡನೇ ಮದುವೆಯಾಗಿದ್ದು, ಮಲ ತಂದೆಯೂ ಈ ಕೃತ್ಯಕ್ಕೆ ಸಹಕರಿಸಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಅದು ಹೇಗೋ ಅವರಿಂದ ತಪ್ಪಿಸಿಕೊಂಡ ಅಪ್ರಾಪ್ತ ಬಾಲಕಿ ಪೊಲೀಸರ ಸಹಾಯ ಪಡೆದಿದ್ದಾಳೆ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.