ಮಹಿಳೆಗೆ ಗನ್ ತೋರಿಸಿ ಬೆದರಿಸಿ ಅತ್ಯಾಚಾರ
ಮೂವರು ಕಾಮುಕರ ಪೈಕಿ ಒಬ್ಬಾತ ಮಹಿಳೆ ವಾಸವಿದ್ದ ಮನೆಯ ಮಾಲಿಕನಾಗಿದ್ದ. ಮಹಿಳೆ ತನ್ನ ಮಗುವಿಗೆ ಬಟ್ಟೆ ಖರೀದಿಸಲು ಅಂಗಡಿಗೆ ಹೋಗಿದ್ದಳು. ಆಟೋದಲ್ಲಿ ಬರುತ್ತಿದ್ದಾಗ ಸ್ಕಾರ್ಪಿಯೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಆಟೋ ತಡೆದು ಮಹಿಳೆಯನ್ನು ಎಳೆದುಕೊಂಡು ನಿರ್ಜನ ಪ್ರದೇಶವೊಂದಕ್ಕೆ ಹೋಗಿದ್ದಾರೆ.
ಬಳಿಕ ಗನ್ ತೋರಿಸಿ ಅತ್ಯಾಚಾರವೆಸಗಿದ್ದಾರೆ. ಘಟನೆ ಬಳಿಕ ಮಹಿಳೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದರೂ ಕಿವಿಗೊಡಲಿಲ್ಲ. ಬಳಿಕ ಮಹಿಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.