IPL 2025 ಗುಜರಾತ್‌ ವಿರುದ್ಧ ಸೋತ ರಾಜಸ್ಥಾನ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌ಗೆ ಡಬಲ್‌ ಶಾಕ್‌

Sampriya

ಗುರುವಾರ, 10 ಏಪ್ರಿಲ್ 2025 (14:32 IST)
Photo Courtesy X
ಅಹಮದಾಬಾದ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 23ನೇ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ 58 ರನ್‌ಗಳಿಂದ ಸೋತ ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ಡಬಲ್‌ ಶಾಕ್‌ ಎದುರಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್‌ ಟೈಟಾನ್ಸ್‌  ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಸೋಲು ಕಂಡಿತು. ಈ ಬೆನ್ನಲ್ಲೇ  ಸಂಜು ಸ್ಯಾಮ್ಸನ್‌ ಅವರಿಗೆ ₹ 24 ಲಕ್ಷ ದಂಡ ವಿಧಿಸಲಾಗಿದೆ.

ಟೈಟನ್ಸ್‌ ವಿರುದ್ಧ ಪಂದ್ಯದಲ್ಲಿ ನಿಧಾನಗತಿಯ ಓವರ್‌ ರೇಟ್‌ ಕಾಯ್ದುಕೊಂಡಿದ್ದಕ್ಕಾಗಿ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಸಕ್ತ ಆವೃತ್ತಿಯಲ್ಲಿ ಸ್ಲೋ ಓವರ್‌ ರೇಟ್‌ಗಾ ಆರ್‌ಆರ್‌ಗೆ 2ನೇ ಬಾರಿ ದಂಡ ವಿಧಿಸಲಾಗಿದೆ. ಇನ್ನೊಂದು ಪಂದ್ಯದಲ್ಲಿ ಈ ಘಟನೆ ಮರುಕಳಿಸಿದ್ರೆ ಸ್ಯಾಮ್ಸನ್‌ ಒಂದು ಪಂದ್ಯದಿಂದ ಬ್ಯಾನ್‌ ಆಗಲಿದ್ದಾರೆ.

ಇದಕ್ಕೂ ಮೊದಲು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಆರ್‌ ಸ್ಲೋ ಓವರ್‌ ರೇಟ್‌ ಕಾಯ್ದುಕೊಂಡಿತ್ತು. ಆಗ ಸ್ಟ್ಯಾಂಡ್‌ ಇನ್‌ ಕ್ಯಾಪ್ಟನ್‌ ಆಗಿದ್ದ ರಿಯಾನ್‌ ಪರಾಗ್‌ಗೆ  12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಜೊತೆಗೆ ತಂಡದ ಇತರ ಆಟಗಾರರಿಗೆ ಪಂದ್ಯ ಶುಲ್ಕದ ಶೇ 25 ರಷ್ಟು ಅಥವಾ ತಲಾ ₹ 6 ಲಕ್ಷ ರೂ. ದಂಡ ವಿಧಿಸಿತ್ತು. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದಿದ್ದರು. 2ನೇ ಬಾರಿ ಅದೇ ತಪ್ಪು ಮಾಡಿದ್ದರಿಂದ ತಂಡದ ನಾಯಕ ಸ್ಯಾಮ್ಸನ್‌ಗೆ ₹ 24 ಲಕ್ಷ ದಂಡ ವಿಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ