ಬೆಂಗಳೂರು: ಟೀಕಿಸುತ್ತಾರೆಂದು ಅವರನ್ನು ಸುಮ್ಮನೇ ಬಿಡಲು ಸಾಧ್ಯವಿಲ್ಲ. ಅವರು ಬೆಂಗಳೂರಿನ ಒಂದು ಭಾಗವಾಗಿರುವುದರಿಂದ ಕೆಲವು ಉತ್ತಮ ಸಲಹೆಗಳನ್ನು ನೀಡಿದ್ದಾರೆಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ನಾಗರಿಕರೊಂದಿಗಿನ ಸಂವಾದದ ಕುರಿತು ಮಾತನಾಡಿದ ಶಿವಕುಮಾರ್, ನಾನು ಮೋಹನ್ ದಾಸ್ ಪೈ ಮತ್ತು ಕಿರಣ್ ಮಜುಂದಾರ್ ಶಾ ಅವರನ್ನು ಭೇಟಿ ಬಗ್ಗೆ ಪ್ರತಿಕ್ರಿಯಿಸಿದರು.
ನಾನು ಅವರ ಅಭಿಪ್ರಾಯವನ್ನು ತೆಗೆದುಕೊಂಡೆ. ಅವರು ನಮ್ಮನ್ನು ಟೀಕಿಸುತ್ತಾರೆ ಎಂಬ ಕಾರಣಕ್ಕಾಗಿ ನಾವು ಅವರನ್ನು ಬಿಡಲು ಸಾಧ್ಯವಿಲ್ಲ. ಅವರು ಬೆಂಗಳೂರಿನ ಭಾಗ. ಅವರು ಕೆಲವು ಉತ್ತಮ ಸಲಹೆಗಳನ್ನು ನೀಡಿದ್ದಾರೆ ಎಂದರು.
ನಾವು ಅವುಗಳನ್ನು ಪ್ರಜಾಪ್ರಭುತ್ವ ಮತ್ತು ಅಧಿಕಾರಶಾಹಿ ವ್ಯವಸ್ಥೆಯೊಳಗೆ ಪೂರ್ಣಗೊಳಿಸಬೇಕು. ಅವರು ತೆರಿಗೆದಾರರು. ನಾವು ಅವರ ಮಾತನ್ನು ಕೇಳಬೇಕೆಲ್ವಾ ಎಂದರು.