ಮುಸ್ಲಿಂ ಪತಿ 2ನೇ ಮದುವೆಯಾಗುವಂತಿಲ್ಲ : ಹೈಕೋರ್ಟ್

ಬುಧವಾರ, 12 ಅಕ್ಟೋಬರ್ 2022 (14:19 IST)
ಲಕ್ನೋ : ತನ್ನ ಹೆಂಡತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗದ ಮುಸ್ಲಿಂ ಸಮುದಾಯದ ಪುರುಷ ಕುರಾನ್ ಪ್ರಕಾರವೇ 2ನೇ ಮದುವೆಯಾಗಲು ಅವಕಾಶವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಪ್ರಕಾಶ್ ಕೇಸರವಾಣಿ ಹಾಗೂ ನ್ಯಾಯಮೂರ್ತಿ ರಾಜೇಂದ್ರ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠವು ಈ ಆದೇಶ ಪ್ರಕಟಿಸಿದೆ. 

ಇದರೊಂದಿಗೆ ಮೊದಲ ಪತ್ನಿಯ ಇಚ್ಛೆಯನ್ನು ವಿರೋಧಿಸಿ, 2ನೇ ಮದುವೆಯಾದ ವ್ಯಕ್ತಿ ಮೊದಲ ಪತ್ನಿಯೂ ತನ್ನೊಂದಿಗೆ ಇರಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ