ಸಿನಿಮೀಯ ರೀತಿಯಲ್ಲಿ ಪಟಿಯಾಲ ಜೈಲಿಗೆ ದಾಳಿ ನಡೆಸಿ ಆರೋಪಿಗಳ ಜತೆ ದುಷ್ಕರ್ಮಿಗಳು ಪರಾರಿ

ಭಾನುವಾರ, 27 ನವೆಂಬರ್ 2016 (19:31 IST)
ಪಟಿಯಾಲ:  ಇದು ಸಿನಿಮಾದಲ್ಲಿ ನಡೆಯುವಂತಹ ಘಟನೆ ಎನಿಸಬಹುದು. ಆದರೆ ಪಂಜಾಬ್ ರಾಜ್ಯದ ಪಟಿಯಾಲದ ನಾಭಾ ಜೈಲಿಗೆ ಪೊಲೀಸರ ವೇಷದಲ್ಲಿ ಬಂದ ಶಸ್ತ್ರಧಾರಿ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಲ್ಲದೆ, ಖಾಲಿಸ್ತಾನ್ ಲಿಬರೇಷನ್ ಫ್ರಂಟ್ ಮುಖ್ಯಸ್ಥ ಹರ್ಮಿಂದರ್ ಮಿಂಟೂ ಸೇರಿದಂತೆ ಐವರು ಆರೋಪಿಗಳನ್ನು ಕರೆದೊಯ್ದಿದ್ದಾರೆ.

ಈ ಹಿನ್ನಲೆಯಲ್ಲಿ ಪಂಜಾಬ್ ಸರ್ಕಾರ ಡಿಜಿ ಮತ್ತು ಇತರ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಭದ್ರತಾ ಲೋಪವೇ ಘಟನೆಗೆ ಕಾರಣ ಎಂಬ ಹಿನ್ನಲೆಯಲ್ಲಿ ಸರ್ಕಾರ ಅಧಿಕಾರಿಗಳ ತಲೆದಂಡ ಮಾಡಲಾಗಿದೆ.

ಕೆಲವು ಶಸ್ತ್ರ ಸಜ್ಜಿತ ಯುವಕರ ಗುಂಪು ಏಕಾ ಏಕಿ ಜೈಲಿನ ಆವರಣಕ್ಕೆ ಪ್ರವೇಶಿಸಿ ಯದ್ವಾ ತದ್ವಾ ಗುಂಡಿನ ಸುರಿಮಳೆ ಸುರಿಸಿದ್ದಾರೆ. ನಂತರ ಸುಮಾರು 10 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಹರ್ಮಿಂದರ್ ಸೇರಿದಂತೆ ಕೇಂದ್ರ ಐವರು ಖೈದಿಗಳನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಪಂಜಾಬ್ ಮತ್ತು ಹರ್ಯಾಣದ ಬಸ್ಸು, ರೈಲು, ವಿಮಾನ ನಿಲ್ದಾಣಗಳಲ್ಲಿ ಸುರಕ್ಷತೆ ಹೆಚ್ಚಿಸಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಸಲಾಗಿದೆ. ಪಂಜಾಬ್ ಮುಖ್ಯಮಂತ್ರಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಕಾರ್ಯತಂತ್ರಗಳ ಕುರಿತು ಚರ್ಚಿಸಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ಕೊಟ್ಟವರಿಗೆ 25 ಲಕ್ಷ ಬಹುಮಾನವನ್ನೂ ಘೋಷಿಸಲಾಗಿದೆ.  ವೇಳೆ ಕೇಂದ್ರ ಸರ್ಕಾರ ಕೂಡಾ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರದ ವರದಿ ಕೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ