ನರಸಿಂಗ್ ಯಾದವ್ ಪ್ರಕರಣ ಸಿಬಿಐಗೆ

ಶನಿವಾರ, 17 ಸೆಪ್ಟಂಬರ್ 2016 (10:55 IST)
ಉದ್ದೀಪನಾ ಮದ್ದು ಸೇವನೆ ಸಾಬೀತಾದ ಕಾರಣ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದ ಕುಸ್ತಿಪಟು ನರಸಿಂಗ್ ಯಾದವ್ ಪ್ರಕರಣವನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಸಿಬಿಐ ತನಿಖೆಗೊಪ್ಪಿಸಿದೆ. ಭಾರತೀಯ ಕುಸ್ತಿ ಸಂಸ್ಥೆ ಶುಕ್ರವಾರ ಈ ಕುರಿತು ಅಧಿಕೃತ ಮಾಹಿತಿ ಲಭಿಸಿದೆ. 

 
ಪ್ರಕರಣವನ್ನು ಸಿಬಿಐಗೆ ನೀಡುವಂತೆ ಪ್ರಧಾನಿಗಳಿಗೆ ಕೇಳಿಕೊಂಡಿದ್ದೆ. ಅದರಂತೆ ಪಿಎಂಓ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಸೂಚಿಸಿದೆ. ನನಗಿದು ಸಂತೋಷ ತಂದಿದೆ ಎಂದು ಕುಸ್ತಿ ಸಂಸ್ಥೆಯ ಅಧ್ಯಕ್ಷ ಬ್ರಿಜಿ ಭೂಷಣ್ ಶರಣ್ ಸಿಂಗ್ ತಿಳಿಸಿದ್ದಾರೆ.
 
ಉದ್ದೀಪನಾ ಮದ್ದು ಸೇವನೆ ಸಾಬೀತಾದ ಕಾರಣ ನರಸಿಂಗ್ ಕಳೆದ ನಾಲ್ಕು ವರ್ಷದಿಂದ ನಿಷೇಧ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ. 
 
2015ರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 74ಕೆಜಿ ವಿಭಾಗದಲ್ಲಿ  ಕಂಚಿನ ಪದಕ ಗೆದ್ದಿದ್ದ ನರಸಿಂಗ್ ಯಾದವ್ ಬಳಿಕ ಜೂನ್ ತಿಂಗಳಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಾಡಾ ನಡೆಸಿದ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿದ್ದರು. 
 
ಅಂತರಾಷ್ಟ್ರೀಯ ಕುಸ್ತಿ ಸಂಸ್ಥೆ ಅವರಿಗೆ ರಿಯೋದಲ್ಲಿ ಭಾಗವಹಿಸಲು ಅನುಮತಿ ನೀಡಿತ್ತು. ಆದರೆ ನಾಡಾ ಅದಕ್ಕೆ ತಡೆಯೊಡ್ಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ