ಚೀನಾದೊಂದಿಗೆ `ರಾಷ್ಟ್ರಧ್ವಜ ಒಪ್ಪಂದ’ ಮಾಡ್ಕೊಂಡಿದ್ದಾರೆ : ರಾಹುಲ್ ಗಾಂಧಿ

ಶನಿವಾರ, 13 ಆಗಸ್ಟ್ 2022 (12:39 IST)
ನವದೆಹಲಿ : ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದೊಂದಿಗೆ ತ್ರಿವರ್ಣಧ್ವಜ ಒಪ್ಪಂದ ಮಾಡಿಕೊಂಡಿದ್ದಾರೆ. ಚೀನಾದೊಂದಿಗೆ ಒಪ್ಪಂದ ಮಾಡೊಕೊಂಡಿರುವ ಪ್ರಧಾನಿ ಹೇಗೆ ಅದರ ನುಸುಳುವಿಕೆ ತಿಳಿಯುತ್ತದೆ ಎಂದು ಕುಟುಕಿದ್ದಾರೆ.

ದೇಶದ ಇಂಚಿಂಚನ್ನೂ ರಕ್ಷಿಸಲು ಹೋರಾಡುವವನೇ ನಿಜವಾದ ದೇಶಭಕ್ತ. ಪ್ರಧಾನಿ ಹಾಗೇ ಮಾಡುತ್ತಿಲ್ಲ. ಚೀನಾ ನಮ್ಮ ದೇಶದ ಗಡಿಯನ್ನು ಆಕ್ರಮಿಸಿಕೊಳ್ಳಲು ಹರಸಾಹಸ ಮಾಡಿದೆ. ಆದರೆ ಮೋದಿ ಎಂಟು ವರ್ಷಗಳ ಕಾಲ ಚೀನಾದ ಮುಂದೆ ತಲೆಬಾಗಿದ್ದಾರೆ ಇದನ್ನು ಕಾಂಗ್ರೆಸ್ ಪ್ರಶ್ನಿಸಿದರೂ ಅವರಿಗೆ ಲೆಕ್ಕಿಕ್ಕಿಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ