ಭಾರತಕ್ಕೆ ಚೀನಾ ಮನವಿ ಏನು?

ಮಂಗಳವಾರ, 9 ಆಗಸ್ಟ್ 2022 (08:57 IST)
ಬೀಜಿಂಗ್ : ಆಯಕಟ್ಟಿನ ಹಂಬಂಟೋಟಾ ಬಂದರಿನಲ್ಲಿ ಚೀನಾದ ಉನ್ನತ ತಂತ್ರಜ್ಞಾನದ ಸಂಶೋಧನಾ ನೌಕೆಯ ಯೋಜಿತ ಡಾಕಿಂಗ್ ಅನ್ನು ಮುಂದೂಡಲು ಶ್ರೀಲಂಕಾದ ಮನವಿಯಿಂದ ರೊಚ್ಚಿಗೆದ್ದ ಚೀನಾ,

ಕೊಲಂಬೊದ ಮೇಲೆ ಒತ್ತಡ ಹೇರುವುದು ಅರ್ಥಹೀನ ಎಂದು ಸೋಮವಾರ ಭಾರತವನ್ನು ಕೇಳಿಕೊಂಡಿದೆ. ಕೊಲಂಬೊದ ವರದಿಗಳ ಪ್ರಕಾರ, ಭಾರತವು ಭದ್ರತಾ ಕಳವಳ ವ್ಯಕ್ತಪಡಿಸಿದೆ.

ಈ ಕಾರಣ ಆಗಸ್ಟ್ 11 ರಿಂದ 17 ರವರೆಗೆ ಹಂಬನ್ತೋಟ ಬಂದರಿನಲ್ಲಿ ಡಾಕಿಂಗ್ ಮಾಡಲು ನಿಗದಿಯಾಗಿದ್ದ ಚೀನಾದ ಬಾಹ್ಯಾಕಾಶ ಮತ್ತು ಉಪಗ್ರಹ ಟ್ರ್ಯಾಕಿಂಗ್ ಸಂಶೋಧನಾ ನೌಕೆ ‘ಯುವಾನ್ ವಾಂಗ್ 5’ ಆಗಮನವನ್ನು ಮುಂದೂಡುವಂತೆ ಶ್ರೀಲಂಕಾ ಬೀಜಿಂಗ್ಗೆ ಕೇಳಿಕೊಂಡಿದೆ. 

ವರದಿಗಳಿಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, ಬೀಜಿಂಗ್ ವರದಿಗಳನ್ನು ಗಮನಿಸಿದೆ. ಚೀನಾ ಮತ್ತು ಶ್ರೀಲಂಕಾ ನಡುವಿನ ಸಹಕಾರವು ಎರಡು ದೇಶಗಳ ಸ್ವತಂತ್ರ ಆಯ್ಕೆಯಾಗಿದೆ. ಎರಡು ದೇಶಗಳು ಸಾಮಾನ್ಯ ಹಿತಾಸಕ್ತಿಗಳನ್ನು ಪೂರೈಸುತ್ತದೆ. ಇದು ಯಾವುದೇ ಮೂರನೇ ವ್ಯಕ್ತಿಯನ್ನು ಗುರಿಯಾಗಿಸಿಲ್ಲ ಎಂದು ಟೀಕಿಸಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ