ಜನಸಂಖ್ಯೆಯಲ್ಲಿ ಚೀನಾ ಮೀರಿಸಲಿದೆ ಭಾರತ!

ಸೋಮವಾರ, 8 ಆಗಸ್ಟ್ 2022 (07:24 IST)
2023 ರಲ್ಲಿ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ  ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ವಿಶ್ವಸಂಸ್ಥೆಯ ಇತ್ತೀಚಿನ ವರದಿಯು ಭವಿಷ್ಯ ನುಡಿದಿದೆ.
 
ಇದು ವಿವಿಧ ಕ್ಷೇತ್ರಗಳಲ್ಲಿ ಕೆಲವು ಆತಂಕಕಾರಿ ಪರಿಸ್ಥಿತಿಗೆ ಕಾರಣವಾಗುವ ಸಾಧ್ಯತೆಗಳಿವೆ. ಒಂದು ದೊಡ್ಡ ಸವಾಲು ಎಂದರೆ ಭಾರತದ ಸಬ್ಸಿಡಿ ವ್ಯವಸ್ಥೆ. ಬಹುಶಃ ಜಾಗತಿಕವಾಗಿ ಪ್ರಮಾಣ ಮತ್ತು ಫಲಾನುಭವಿಗಳ ಸಂಖ್ಯೆಯಲ್ಲಿ 80 ಕೋಟಿ ಎನ್ನುವುದು ಅತಿ ದೊಡ್ಡ ಸಂಖ್ಯೆಯಾಗಿದೆ.

ಕಠಿಣ ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿಯನ್ನು ಸಮತೋಲನಗೊಳಿಸುವುದು ಭಾರತದಲ್ಲಿ ಸವಾಲಿನ ವಿಚಾರ.

ಅಂತಹ ಬೃಹತ್ ಸಬ್ಸಿಡಿ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು ಭಾರತದಲ್ಲಿ ವಿಪರೀತ ಕಷ್ಟಕರವಾಗಿರುತ್ತದೆ. ಆಹಾರ, ಕೃಷಿ ಮತ್ತು ಅಗತ್ಯವಿರುವವರಿಗೆ ಮೀಸಲಾದ ವಿವಿಧ ಸಬ್ಸಿಡಿಗಳ ಕಳ್ಳತನವನ್ನು ತೆಗೆಯವುದು ಅಗತ್ಯವಾಗಿದೆ, ಇದು ಶಿಕ್ಷಣ, ಆರೋಗ್ಯ ವ್ಯವಸ್ಥೆಗಳು ಮತ್ತು ಇತರ ಮೂಲಭೂತ ಸೌಕರ್ಯಗಳನ್ನು ಬಲಪಡಿಸಲು ಬಳಸಬಹುದಾದ ಹಣಕಾಸಿನ ಉಳಿತಾಯಕ್ಕೆ ಕಾರಣವಾಗಬಹುದು ಎನ್ನುವುದು ಗಮನಾರ್ಹ ವಿಚಾರ.

ಕೇಂದ್ರ ಮತ್ತು ರಾಜ್ಯಗಳು ಖರ್ಚು ಮಾಡಿದ ಸಬ್ಸಿಡಿಗಳ ಒಟ್ಟು ಪ್ರಮಾಣವು 19-20ರ ಆರ್ಥಿಕ ವರ್ಷದಲ್ಲಿ 5.6 ಲಕ್ಷ ಕೋಟಿ ರೂಪಾಯಿಗಳಿಂದ 21-22 ಆರ್ಥಿಕ ವರ್ಷದಲ್ಲಿ 27.07 ಲಕ್ಷ ಕೋಟಿ ರೂಪಾಯಿಗಳ ತೆರಿಗೆಯಿಂದ 8.86 ಲಕ್ಷ ಕೋಟಿ ರೂಪಾಯಿಗಳಿಗೆ ವೇಗವಾಗಿ ಏರಿಕೆ ಕಂಡಿದೆ.

ಸಬ್ಸಿಡಿಗಳಿಗಾಗಿ ಖರ್ಚು ಮಾಡಿದ ಮೊತ್ತವು ದೇಶದ ಒಟ್ಟು ತೆರಿಗೆ ಸಂಗ್ರಹದ 33% ಮತ್ತು ಉಆP ಯ 6%, ಆಗಿದ್ದು ಸ್ಪಷ್ಟವಾಗಿ ಇದು ಗಮನಾರ್ಹ ಭಾಗವಾಗಿದೆ.

ಪರಿಹಾರಗಳು

ಅಂತರ್ಜಲ ಕುಸಿತ ಮತ್ತು ರಸಗೊಬ್ಬರಗಳ ಮಿತಿಮೀರಿದ ಬಳಕೆಯನ್ನು ತಪ್ಪಿಸಲು ಉಚಿತ ವಿದ್ಯುತ್ ಮತ್ತು ಸಬ್ಸಿಡಿ ರಸಗೊಬ್ಬರಗಳನ್ನು ಮೀಟರಿಂಗ್-ಮಾನಿಟರಿಂಗ್ ವ್ಯವಸ್ಥೆಯಲ್ಲಿ ಬದಲಾಯಿಸಬೇಕಾಗಿದೆ. ಕೃಷಿ-ವ್ಯವಹಾರ ಕಂಪನಿಗಳು ಅದನ್ನು ಪಡೆಯುತ್ತಿರುವುದರಿಂದ ಕೃಷಿ ಸಾಲದ ಬಡ್ಡಿ ಸಬ್ವೆನ್ಷನ್ ಯೋಜನೆಯಲ್ಲಿ ಸೋರಿಕೆಯನ್ನು ಮುಚ್ಚುವುದು ಅತ್ಯಗತ್ಯ.

ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬಹು ಸಬ್ಸಿಡಿಗಳನ್ನು ಪಡೆಯುವ ಜನರನ್ನು ತೆಗೆದುಹಾಕಲು ಮತ್ತು ಅಸಮರ್ಥತೆಯನ್ನು ಕಡಿಮೆ ಮಾಡಲು ಆಹಾರ ಸೇರಿದಂತೆ ಹೆಚ್ಚಿನ ಸಬ್ಸಿಡಿ ಪಾವತಿಗಳನ್ನು ಆಃಖಿ ಗೆ ವರ್ಗಾಯಿಸಲು ಸರ್ಕಾರವು ಬೃಹತ್ ಕೆಲಸ ಕೈಗೊಳ್ಳಬೇಕಾಗಿದೆ..

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ