ರಾಹುಲ್ ಗಾಂಧಿ ವಿರುದ್ಧ ಮುಗಿಬೀಳಲು ಎನ್ ಡಿಎ ನಾಯಕರ ಸಭೆ

Krishnaveni K

ಮಂಗಳವಾರ, 2 ಜುಲೈ 2024 (10:31 IST)
ನವದೆಹಲಿ: ನಿನ್ನೆ ಸಂಸತ್ ನಲ್ಲಿವೀರಾವೇಷದಿಂದ ಭಾಷಣ ಮಾಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಇಂದು ಪ್ರಧಾನಿ ಮೋದಿ ಠಕ್ಕರ್ ಕೊಡಲಿದ್ದಾರೆ. ಇಂದಿನ ಮೋದಿ ಭಾಷಣಕ್ಕೆ ಮುನ್ನ ಎನ್ ಡಿಎ ನಾಯಕರ ಸಭೆ ನಡೆದಿದೆ.

ಇಂದು ಸಂಜೆ 4 ಗಂಟೆಗೆ ಪ್ರಧಾನಿ ಮೋದಿ ಸಂಸತ್ ನಲ್ಲಿ ಭಾಷಣ ಮಾಡಲಿದ್ದಾರೆ. ಈ ವೇಳೆ ನಿನ್ನೆ ರಾಹುಲ್ ಗಾಂಧಿ ಮಾಡಿದ ಎಲ್ಲಾ ಆರೋಪಗಳಿಗೆ ಪ್ರತ್ಯುತ್ತರ ನೀಡುವ ನಿರೀಕ್ಷೆಯಿದೆ. ಇದಕ್ಕೆ ಮುನ್ನ ಇಂದು ಎನ್ ಡಿಎ ನಾಯಕರ ಜೊತೆ ಪ್ರಧಾನಿ ಮೋದಿ ಸಭೆ ನಡೆಸಿದ್ದಾರೆ.

ನಿನ್ನೆ ರಾಹುಲ್ ಆಕ್ರಮಣಕಾರಿಯಾಗಿ ಭಾಷಣ ಮಾಡಿದ್ದರು. ಅವರ ಭಾಷಣಕ್ಕೆ ವಿಪಕ್ಷಗಳೂ ಒಗ್ಗಟ್ಟಾಗಿ ಸಾಥ್ ನೀಡಿದ್ದವು. ಇಂದು ಮೋದಿ ಭಾಷಣದ ವೇಳೆಯೂ ಮಿತ್ರಪಕ್ಷಗಳು ಇದೇ ರೀತಿ ಒಗ್ಗಟ್ಟು ಪ್ರದರ್ಶಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ರಾಹುಲ್ ಗಾಂಧಿ ಆಕ್ರಮಣಕಾರೀ ಭಾಷಣಕ್ಕೆ ಆಡಳಿತ ಪಕ್ಷವೂ ಆಕ್ರಮಣಕಾರಿಯಾಗಿ ಪ್ರತ್ಯುತ್ತರ ಕೊಡಬೇಕು ಎಂದು ನಿರ್ಧರಿಸಲಾಗಿದೆ.

ಹೀಗಾಗಿ ಇಂದು ಮೋದಿ ಭಾಷಣವೂ ಖಡಕ್ ಆಗಿರಲಿದ್ದು, ಈ ವೇಳೆ ವಿಪಕ್ಷಗಳಿಂದ ಪ್ರತಿರೋಧ ಬರುವುದು ನಿರೀಕ್ಷಿತವಾಗಿದೆ. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಒಗ್ಗಟ್ಟಾಗಿ ಪ್ರತಿಕ್ರಿಯಿಸಲು ಕರೆ ನೀಡಲಾಗಿದೆ. ಟಿಡಿಪಿ, ಜೆಡಿಯು ಸೇರಿದಂತೆ ಮಿತ್ರ ಪಕ್ಷಗಳು ಎನ್ ಡಿಎ ಸಭೆಯಲ್ಲಿ ಭಾಗಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ